ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
- ಅಕ್ರಮವಾಗಿ ಮದ್ಯ ಮಾರಾಟ
- ಅಂಗಡಿಗಳ ಮೇಲೆ ದಾಳಿ
ಹಲಗೂರು: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿದ ಹಲಗೂರು ಪೊಲೀಸರು ಮದ್ಯ ವಶಪಡಿಸಿಕೊಂಡಿದ್ದಾರೆ.
ಸಮೀಪದ ಲಿಂಗಣಾಪುರ ಗ್ರಾಮದ ನಿಂಗಯ್ಯ ಮತ್ತು ಕೃಷ್ಣ ತಮ್ಮ ಅಂಗಡಿ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮುಜುಗರ ಉಂಟಾಗುವ ರೀತಿಯಲ್ಲಿ ಕೆಲವು ವ್ಯಕ್ತಿಗಳನ್ನು ಕೂರಿಸಿಕೊಂಡು ಮದ್ಯ ಸೇವನೆ ಮಾಡಲು ಮನೆಯಿಂದ ನೀರು ಲೋಟ ಮತ್ತು ತಿಂಡಿ ಇತ್ಯಾದಿ ನೀಡಲಾಗುತ್ತಿದೆ ಎಂಬ ದೂರು ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಹಲಗೂರು ಠಾಣೆ ಎಸ್‌ಐ ಲೋಕೇಶ್ ಮತ್ತು ಸಿಬ್ಬಂದಿ ದಾಳಿ ಮಾಡಿ, ಮಾರಾಟ ಮಾಡಲು ಇಟ್ಟಿದ್ದ 90 ಮಿಲಿ ಗಾತ್ರದ 6 ಟೆಟ್ರಾ ಪ್ಯಾಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ನಿಂಗಯ್ಯ ಮತ್ತು ಕೃಷ್ಣ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ನೋಟಿಸ್ ಜಾರಿ ಮಾಡಿ ಬಿಡುಗಡೆ ಮಾಡಲಾಯಿತು. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.