ಪಾಂಡವಪುರ ತಾಲೂಕಿನ ಡಿಂಕಾ ಗ್ರಾಪಂ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು.ಗ್ರಾಪಂ ವ್ಯಾಪ್ತಿಯ ಮುಖಂಡರಾದ ರೇವಣ್ಣ, ಸ್ವಾಮಿಗೌಡ, ಗುರುದತ್ತ ರೈತಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ರಘು ಇತರರು ಇದ್ದರು. 
ಮಂಡ್ಯ

ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಖಂಡನೀಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೇಸರ

ಪಾಂಡವಪುರ:

ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಪ್ರಕರಣ ಖಂಡನೀಯ, ಇಂತಹ ಪ್ರಕರಣಗಳು ಮರು ಕಳಿಸಬಾರದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಡಿಂಕಾ ಗ್ರಾಪಂ ವ್ಯಾಪ್ತಿಯ ಡಿಂಕಾ ಗ್ರಾಮದಲ್ಲಿ 77 ಲಕ್ಷ ರೂ.ವೆಚ್ಚದಲ್ಲಿ ರಸ್ತೆ, ಯುಜಿಡಿ, ಡಿಂಕಾ ಶೆಟ್ಟಹಳ್ಳಿ 60 ಲಕ್ಷ ರೂ., ಹೊಸಸಾಯಪನಹಳ್ಳಿ 33 ಲಕ್ಷ ರೂ., ಮಲ್ಲಿಗೆರೆ ಗ್ರಾಮಕ್ಕೆ 22 ಲಕ್ಷ ರೂ. ಹಾಗೂ ವಳಲೇಕಟ್ಟೆಕೊಪ್ಪಲು 8 ಲಕ್ಷ ರೂ. ಸೇರಿದಂತೆ ಒಟ್ಟಾರೆ 2 ಕೋಟಿ ರೂ. ಅನುದಾನದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹಲ್ಲೆ ನಡೆಸಿರುವ ಮಾಜಿ ಸದಸ್ಯ ಪಾರ್ಥಸಾರಥಿ ಅವರು ಈ ಹಿಂದಿನ ಪುರಸಭೆ ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ನಮ್ಮ ಪಕ್ಷದವರೇ ಆಗಲಿ ಯಾವುದೇ ಪಕ್ಷದವರೇ ಆಗಲಿ ತಪ್ಪು ಮಾಡಿದವರು ತಪ್ಪಿತಸ್ಥರೇ ಎಂದು ಭಾವಿಸಬೇಕು. ತಪ್ಪು ಮಾಡಿದವರನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಮೇಲುಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಿಯಾಗದೆ ಅಗತ್ಯವಿರುವ ಎಲ್ಲ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು ಎಂದು ವಿವರಿಸಿದರು.
ಈ ವೇಳೆ ಗ್ರಾಪಂ ವ್ಯಾಪ್ತಿಯ ಮುಖಂಡರಾದ ರೇವಣ್ಣ, ಸ್ವಾಮಿಗೌಡ, ಗುರುದತ್ತ ರೈತಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ರಘು ಇತರರು ಇದ್ದರು.