ಮಂಡ್ಯ ತಾಲೂಕು ಎಚ್.ಮಲ್ಲಿಗೆರೆ ಗ್ರಾಮದ ಚನ್ನಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಹಿರಿಯ ವಕೀಲ ಎಚ್.ಬಸವಯ್ಯ ಅವರನ್ನು ಸನ್ಮಾನಿಸಲಾಯಿತು. 
ಮಂಡ್ಯ

ಚಿಣ್ಣರಿಂದ ಪ್ಲಾಸ್ಟಿಕ್ ದುಷ್ಪರಿಣಾಮದ ಜಾಗೃತಿ: ಎಚ್.ಮಲ್ಲಿಗೆರೆ ಚನ್ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಂಡ ಜನರು
  • ಪ್ರಶಂಸೆಗೆಗೆ ಪಾತ್ರವಾದ ಚಿಣ್ಣರ ನಾಟಕ
ಮಂಡ್ಯ: ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಚನ್ನಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಮಕ್ಕಳು ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದರು.
ಸಂಜೆ 6 ಗಂಟೆಗೆ ಸುಮಾರಿಗೆ ಪ್ರಾರಂಭವಾದ ಕಾರ್ಯಕ್ರಮ ಮಧ್ಯರಾತ್ರಿವರೆಗೂ ನಡೆಯಿತು. ಮಕ್ಕಳ ಪಾಲಕರು ಹಾಗೂ ಸಾವಿರಾರೂ ಸಾರ್ವಜನಿಕರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಈ ಪೈಕಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹಾಗೂ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಿದ ನಾಟಕ ಎಲ್ಲರ ಪ್ರಶಂಸೆಗೆ ಒಳಗಾಯಿತು. ಇದಲ್ಲದೆ ಎಲ್ಲ ಮಕ್ಕಳು ಸಂತಸದಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು..
ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮವನ್ನು ಹಿರಿಯ ವಕೀಲ ಎಚ್.ಬಸವಯ್ಯ ಉದ್ಘಾಟಿಸಿದರು. ಅಂತೆಯೇ ಮಕ್ಕಳು ಮತ್ತು ಅವರ ಪಾಲಕರಿಗೆ ಸಂಸ್ಕಾರ, ಸಂಸ್ಕೃತಿ, ಕಲಿಕೆ ಬಗ್ಗೆ ಕಿವಿಮಾತು ಹೇಳಿದರು. ಚೆನ್ನಮ್ಮ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ, ಪ್ಲಾಸ್ಟಿಕ್ ವಿರೋಧಿ ಪರಿಸರ ಮಿತ್ರ ಜಯಶಂಕರ, ಕಾರ್ಯದರ್ಶಿ ವೈ.ಎಂ.ರತ್ನಾ, ಎಚ್.ಮಲ್ಲಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೈ.ಎಂ.ರಮೇಶ್, ಉಪನ್ಯಾಸಕ ಅರುಣ್ ಆರಾಧ್ಯ, ಸಂಸ್ಥೆಯ ತಾರಾ ಪ್ರದೀಪ್ ಇತರರಿದ್ದರು.