ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅನ್ನಂ ಪರಬ್ರಹ್ಮ ಸ್ವರೂಪಂ ಚಲನಚಿತ್ರದ ಫೋಸ್ಟರ್ ಬಿಡುಗಡೆ ಮಾಡಲಾಯಿತು. 
ಮಂಡ್ಯ

ಅನ್ನಂ ಪರಬ್ರಹ್ಮ ಸ್ವರೂಪಂ ಚಿತ್ರ ತೆರೆಗೆ: ನಿರ್ದೇಶಕ ರಾಜೇಗೌಡ ಮಾಹಿತಿ

ಮಂಡ್ಯ: ರಾಜವೀರ ನಿರ್ಮಾಣದ ಸೃಷ್ಟಿಕರ್ತ ಫಿಲಂಸ್‌ನ ರೈತರ ಸಾಧಕ-ಬಾಧಕಗಳ ಆಧಾರಿತ ‘ಅನ್ನಂ ಪರಬ್ರಹ್ಮ ಸ್ವರೂಪಂ’ ಚಲನಚಿತ್ರ ತಾಲೂಕಿನ ಸಾತನೂರು ಗ್ರಾಮದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ದಿನಕ್ಕೆ ನಾಲ್ಕು ಪ್ರದರ್ಶನ ನೀಡಲಾಗುತ್ತಿದೆ. ಜಿಲ್ಲೆಯ ರೈತ ಬಂಧುಗಳು, ಸಿನಿರಸಿಕರು ಸಿನಿಮಾ ವೀಕ್ಷಿಸಿ ಬೆಂಬಲಿಸಬೇಕೆಂದು ಚಿತ್ರದ ನಿರ್ದೇಶಕ ರಾಜೇಗೌಡ ತಿಳಿಸಿದರು.
ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಕನಸಿನ ಚಿತ್ರ ಇದಾಗಿದೆ. ಅವರ ಸಹಕಾರದೊಂದಿಗೆ 8 ವರ್ಷಗಳ ಸುದೀರ್ಘ ಅವಧಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ತಮಿಳುನಾಡಿನ ಜತೆಗಿನ ನೀರಿನ ಹಂಚಿ ವಿವಾದ, ರೈತರ ಜೀವನದ ನೈಜತೆ, ಜೀವನ ಶೈಲಿ, ಕಷ್ಟಗಳನ್ನು ತಿಳಿಸುವುದು ಚಲನಚಿತ್ರದ ಮೂಲ ಉದ್ದೇಶವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದವನಾದ ನಾನು, ಹಲವು ವರ್ಷಗಳಿಂದ ಚಲನಚಿತ್ರೋದ್ಯಮದಲ್ಲಿ ಭಾಗಿಯಾಗಿದ್ದೇನೆ. ಕೋಲಾರದಲ್ಲೂ 10 ಎಕರೆ ಜಮೀನು ಭೋಗ್ಯಕ್ಕೆ ಪಡೆದು ವ್ಯವಸಾಯ ಮಾಡುತ್ತಿದ್ದೇನೆ. ರೈತನಾಗಿ ರೈತರ ಬಗ್ಗೆ ಜನರಿಗೆ ತಿಳಿಸುವ ಸುದ್ದೇಶದಿಂದ ಈ ಚಿತ್ರ ನಿರ್ಮಿಸಲಾಗಿದೆ. ರಾಮನಗರ, ಮಂಡ್ಯ, ಮೈಸೂರಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ವಿವರಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಗೌಡ, ತಾಲೂಕು ಅಧ್ಯಕ್ಷ ಬೂದನೂರು ಪುಟ್ಟಸ್ವಾಮಿ, ವಿಜಯ್, ಸೂರ್ಯಗೌಡ ಇದ್ದರು.