ಮಂಡ್ಯ ನಗರದ ಮಿಮ್ಸ್‌ನಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಶಾಸಕ ಪಿ.ರವಿಕುಮಾರ್ ಗಣಿಗ ನೋಟ್‌ಬುಕ್ ವಿತರಿಸಿದರು.  
ಮಂಡ್ಯ

ಹೆತ್ತವರ ಹೆಸರಲ್ಲಿ ಸಾಮಾಜಿಕ ಸೇವೆ ಮಾಡಲಿ: ಶಾಸಕ ಪಿ.ರವಿಕುಮಾರ್ ಗಣಿಗ ಸಲಹೆ

ಮಂಡ್ಯ: ತಂದೆ, ತಾಯಿ ಹೆಸರನ್ನು ಜೀವಂತವಾಗಿಡಲು ಸಾಮಾಜಿಕ ಸೇವೆ ಮಾಡಬೇಕು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಸಲಹೆ ನೀಡಿದರು.
ನಗರದ ಮಿಮ್ಸ್‌ನಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಅವರ ತಂದೆ ದಿವಂಗತ ಚಿಕ್ಕಣ್ಣ ಅವರ 6ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಮಮತೆಯ ಮಡಿಲು ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನ್ನದಾಸೋಹ ಮತ್ತು ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿದ ಅವರು, ಜನ್ಮ ಕೊಟ್ಟ ಪಾಲಕರ ಋಣ ತೀರಿಸಲು ಸಾಧ್ಯವಿಲ್ಲ. ಜೀವಂತ ವಿದ್ದ ಸಂದರ್ಭದಲ್ಲಿ ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು. ಕಾಲವಾದರೂ ಅವರ ಹೆಸರುಗಳನ್ನು ಜೀವಂತವಾಗಿ ಇಡಬೇಕು. ಆ ರೀತಿ ಸಾಮಾಜಿಕ ಚಟುವಟಿಕೆ ಮಾಡಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಸಮಾಜದಲ್ಲಿ ಉತ್ತಮ ಸಂದೇಶವನ್ನು ಕೊಡಲು ಇಂತಹ ಕಾರ್ಯಗಳು ಮಹತ್ವವನ್ನ ಪಡೆಯುತ್ತವೆ. ಹೆತ್ತವರ ಹೆಸರಿನಲ್ಲಿ ಸಾಮಾಜಿಕ ಕಾರ್ಯ ನಡೆಸುವುದು ಮೆಚ್ಚುಗೆ ವಿಷಯ ಎಂದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮಾತನಾಡಿದರು. ಮಮತೆಯ ಮಡಿಲಿನ ಮಂಗಲ ಯೋಗೇಶ್, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ವಿನಯ್, ಜೈ ಕರ್ನಾಟಕ ಪರಿಷತ್‌ನ ನಾರಾಯಣ್, ನಗರಸಭಾ ಮಾಜಿ ಅಧ್ಯಕ್ಷ ನಾಗೇಶ್, ಜಿಮ್ ರೋಹಿತ್, ಬೆಟ್ಟಳ್ಳಿ ಮಂಜುನಾಥ್, ಮುಡಾ ಮಾಜಿ ಅಧ್ಯಕ್ಷ ನಹೀಂ, ಈರಣ್ಣ, ಯೋಗೇಶ್ ಇದ್ದರು.