ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಕೃಷಿ ಇಲಾಖೆ ಫಲಾನುಭವಿಗಳ ವಿವಿಧ ಯೋಜನೆಯ ಸವಲತ್ತುಗಳನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿತರಣೆ ಮಾಡಿದರು. ತಹಸೀಲ್ದಾರ್ ಲೋಕೇಶ್, ತಾಪಂ ಇಒ ಶ್ರೀನಿವಾಸ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನವೀನ್, ಮುಖಂಡರಾದ ದೊಡ್ಡಯ್ಯ, ನೂರುಲ್ಲಾಮ , ಮಹದೇವು, ಲಿಂಗರಾಜು ಇದ್ದರು. 
ಮಂಡ್ಯ

ಗ್ರಾಮೀಣ ಬದುಕಿಗೆ ಹೈನೋದ್ಯಮ ಸಹಕಾರಿ

ಮಳವಳ್ಳಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಶನಿವಾರ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಕೃಷಿ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿದರು.
ತಾಲೂಕಿನ ಮಾರಗೌಡನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ ಮಾಡಿದರು. ನಂತರ ಮಾತನಾಡಿ, ಗ್ರಾಮೀಣ ಬದುಕಿಗೆ ಪ್ರಸ್ತುತ ಕಾಲಮಾನದಲ್ಲಿ ಹೈನೋದ್ಯಮ ಸಹಕಾರಿಯಾಗಿದ್ದು, ಇಲ್ಲಿನ ಡೇರಿ ಸಂಘವನ್ನು ಎಲ್ಲರೂ ಸಹಮತದಿಂದ ಮುನ್ನಡೆಸಿಕೊಂಡು ಹೋಗುವಂತೆ ಕರೆ ನೀಡಿದರು.
ನಂತರ ಪಟ್ಟಣದ ಅಂಬೇಡ್ಕರ್ ಭವನದ ಬಳಿ ಕೃಷಿ ಇಲಾಖೆಯ ಫಲಾನುಭವಿಗಳ ವಿವಿಧ ಯೋಜನೆಯ ಸವಲತ್ತುಗಳನ್ನು ವಿತರಣೆ ಮಾಡಿದರು. ಕುಂದೂರು ಬೆಟ್ಟದ ರಸಸಿದ್ದೇಶ್ವರ ಮಠದಲ್ಲಿ ಆಯೋಜಿಸಿದ್ದ ಶ್ರೀ ಗುರುಸ್ವಾಮೀಜಿ ಅವರ ಒಂಬತ್ತನೇ ವರ್ಷದ ಪುಣ್ಯಸ್ಮರಣೆ ಹಾಗೂ ಕೃಷಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.
ನಂತರ ಕಲ್ಕುಣಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ಉಪ ವಿಭಾಗ ಕಚೇರಿಗಳ 53 ಲಕ್ಷ ರೂ. ಅನುದಾನದ ಹೊಸ ಕಟ್ಟಡ ನಿರ್ಮಾಣ, 42.5 ಲಕ್ಷ ರೂ. ಅನುದಾನ ಮೌಲಾನ ಅಆದ್ ಮಾದರಿಯ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೂಮಿಪೂಜೆ ನೆರವೇರಿಸಿದರು. ತಹಸೀಲ್ದಾರ್ ಲೋಕೇಶ್, ತಾಪಂ ಇಒ ಶ್ರೀನಿವಾಸ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನವೀನ್, ಮುಖಂಡರಾದ ದೊಡ್ಡಯ್ಯ, ನೂರುಲ್ಲಾಮ , ಮಹದೇವು, ಲಿಂಗರಾಜು ಗ್ರಾಮದ ಮುಖಂಡರು ಇದ್ದರು.