ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಅಹಿಂದ ಸಂರಕ್ಷಣಾ ವೇದಿಕೆ ವತಿಯಿಂದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭರತೇಶ್, ಕೆ.ಟಿ.ಶಿವಕುಮಾರ್, ಮಲವರಾಜ್, ಮರಿಹೆಗ್ಗಡೆ, ಇಂತಿಯಾಜ್, ಶ್ರೀನಿವಾಸ್‌ಶೆಟ್ಟಿ, ಪಿ.ಶಶಿಕುಮಾರ್ ಇದ್ದರು.
ಕನಕದಾಸರ ಕುರಿತು ತಾಪಂ ಸದಸ್ಯ ಭರತೇಶ್ ಬಣ್ಣನೆ
ಮದ್ದೂರು: ನಗರದ ಪ್ರವಾಸಿ ಮಂದಿರದಲ್ಲಿ ಅಹಿಂದ ಸಂರಕ್ಷಣಾ ವೇದಿಕೆಯ ವತಿಯಿಂದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಭಾನುವಾರ ಆಯೋಜನೆ ಮಾಡಲಾಗಿತ್ತು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಭರತೇಶ್ ಮಾತನಾಡಿ, ಕನಕದಾಸರು ಕೀರ್ತನೆಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಮುಂದಾದರು. ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಕ ಕೆ.ಟಿ.ಶಿವಕುಮಾರ್ ಮಾತನಾಡಿ, ಭಕ್ತಿಗೆ ಹೆಸರಾದ ಕನಕದಾಸರು ಕುಲ ಕುಲ ಎನ್ನದಿರಿ ಕುಲದ ನೆಲೆಯನೇನಾದರು ಬಲ್ಲಿರಾ? ಎಂಬಂತೆ ಸಮಾಜದಲ್ಲಿ ನಾವುಗಳು ಜಾತಿ-ಮತ-ಪಂಥವನ್ನು ಮೀರಿದ ಭಕ್ತಿಯಸಾರ ಹಾಗೂ ಸಮಾನತೆಯನ್ನು ಸಾರಿದವರು ಎಂದು ತಿಳಿಸಿದರು.
ಬಟ್ಟೆಯನ್ನು ನೀರಿನಲ್ಲಿ ಹದ್ದಿ ಹಾಕಿಕೊಂಡರೆ ಮಡಿ ಮೈಲಿಗೆ ಹೋಗುವುದಿಲ್ಲ ಹೊಟ್ಟೆಯೊಳಗಿನ ಕಾಮ, ಕ್ರೋಧಗಳನ್ನು ಹೋದಾಗ ಮಾತ್ರ ಮಡಿಯಾಗುವುದು ಎಂದು ಹೇಳಿದರು.
ಅಹಿಂದ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಮಲವರಾಜ್, ಗೌರವಾಧ್ಯಕ್ಷ ಮರಿಹೆಗ್ಗಡೆ, ಉಪಾಧ್ಯಕ್ಷ ಇಂತಿಯಾಜ್ ಉಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್, ಖಂಜಾಚಿ ರಮೇಶ್, ಸಂಚಾಲಕ ಅಸೀಫ್ ಪಾಷ, ನಿರ್ದೇಶಕರಾದ ಜಯರಾಂ, ಪ್ರಮೀಳಾ, ಮಮತಾ ಮುಖಂಡರಾದ ಬೀರೇಶ್, ರಾಚಯ್ಯ, ನಿವೃತ್ತ ಶಿಕ್ಷಕ ದಾಸಪ್ಪ, ನಾಗರಾಜ್, ತೈಲೂರು ಆನಂದಚಾರಿ, ಬಸವಚಾರಿ, ಪುಟ್ಟಲಿಂಗಯ್ಯ, ಶಿವಪ್ಪ, ಸೋಮಶೇಖರ್ ಇದ್ದರು.