ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಅಂಬರೀಷ್ ಜನ್ಮದಿನ ಆಚರಿಸಲಾಯಿತು. ಎಸ್.ಎಲ್.ಲಿಂಗರಾಜು, ಟಿ.ಎಂ.ಹೊಸೂರು ಮಹೇಶ್, ಮೇಳಾಪುರ ಶಾಮಿಯಾನ ಪುಟ್ಟರಾಜು, ಸುನೀಲ್ ಇದ್ದರು. 
ಮಂಡ್ಯ

ಅಭಿಮಾನಿಗಳಿಂದ ಅಂಬರೀಷ್ ಜನ್ಮ ದಿನಾಚರಣೆ

ನಾಗೇಶ ಎಸ್
ಶ್ರೀರಂಗಪಟ್ಟಣ: ಮಾಜಿ ಸಚಿವ ದಿವಂಗತ ಡಾ.ಅಂಬರೀಷ್ ಅವರ 74ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಅಭಿಮಾನಿಗಳು ಕಟೌಟ್‌ಗೆ ಹಾಲಿನ ಅಭಿಷೇಕ, ಪುಷ್ಪಾರ್ಚನೆ, ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ ಮಾಡಿದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಶುಕ್ರವಾರ ಜಮಾವಣೆಗೊಂಡ ಅಂಬರೀಷ್ ಅಭಿಮಾನಿಗಳು ಹಾಗೂ ಬೆಂಬಲಿಗರು, ಅಂಬಿ ಅವರ ಕಟೌಟ್‌ಗೆ ಕ್ಷೀರಾಭಿಷೇಕ ನಡೆಸಿದರು. ಬಳಿಕ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ಅಭಿಮಾನಿಗಳು ಒಳ ರೋಗಿಗಳಿಗೆ ಹಣ್ಣು ವಿತರಿಸಿದರು.
ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು ಮಾತನಾಡಿ, ಪ್ರತಿ ವರ್ಷ ಅಂಬರೀಷ್ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಜಕೀಯ ಹಾಗೂ ರಾಜಕೀಯೇತರವಾಗಿ ಅಜಾತ ಶತ್ರುವಾಗಿದ್ದ ಅವರ ಹುಟ್ಟುಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಟಿ.ಎಂ.ಹೊಸೂರು ಮಹೇಶ್, ಮೇಳಾಪುರ ಶಾಮಿಯಾನ ಪುಟ್ಟರಾಜು, ಪುರಸಭಾ ಮಾಜಿ ಸದಸ್ಯರಾದ ಸುನೀಲ್, ಕುಮಾರ್ ಪಾಪಣ್ಣಿ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ದೇವರಾಜು, ಮರವೇ ಅಧ್ಯಕ್ಷ ಬಿ.ಶಂಕರ್ ಬಾಬು, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಕೃಷ್ಣರಾಜ ಸೊಸೈಟಿ ನಿರ್ದೇಶಕ ಕಂಠಿ ರಘು, ಮುಖಂಡ ನಗುವನಹಳ್ಳಿ ಮಹದೇವಸ್ವಾಮಿ, ಸೋಮೇಶ್, ಗಣಂಗೂರು ನಂಜೇಗೌಡ, ನೆಲಮನೆ ಯಶ್ವಂತ್, ಕಾಬೂಲ್ ಇದ್ದರು.