ಮದ್ದೂರಿನತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಲಕ್ಷ್ಮಿನರಸಿಂಹಸ್ವಾಮಿ ಮಾತನಾಡಿದರು. ಶಿವಣ್ಣ, ಎಚ್.ಡಿ.ಸುರೇಶ್, ಕೃಷ್ಣ, ಶ್ರೀನಿವಾಸ್, ಮಂಜುನಾಥ್, ನರಸಿಂಹಮೂರ್ತಿ ಇದ್ದರು.
ಮದ್ದೂರು : ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ವತಿಯಿಂದ ನಗರದ ತಾಲೂಕು ಕಚೇರಿಯಲ್ಲಿ ಅಗ್ನಿವಂಶ ಕ್ಷತ್ರಿಯ ತಿಗಳರ ಮೂಲ ದೇವರಾದ ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿಯನ್ನು ಶನಿವಾರ ಆಚರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ನಗರದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲ ಆವರಣದಿಂದ ಅಗ್ನಿ ಬನ್ನಿರಾಯ ಸ್ವಾಮಿ ಅವರ ಭಾವಚಿತ್ರವನ್ನು ತೆರೆದ ವಾಹನದಲ್ಲಿಟ್ಟು ನಗರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಲಾಯಿತು. ಬಳಿಕ ತಾಲೂಕು ಕಚೇರಿಯಲ್ಲಿ ಅಗ್ನಿ ಬನ್ನಿರಾಯ ಸ್ವಾಮಿಗೆ ಅಧಿಕಾರಿಗಳು ಹಾಗೂ ಅಗ್ನಿವಂಶ ಕ್ಷತ್ರಿಯ ತಿಗಳರ ಸಂಘದ ಪದಾಧಿಕಾರಿಗಳು ಪುಷ್ಪಾರ್ಚನೆ ಮಾಡಿದರು.
ಶಿರಸ್ತೇದಾರ್ ಲಕ್ಷ್ಮಿನರಸಿಂಹಸ್ವಾಮಿ, ಕ್ಷತ್ರಿಯ ತಿಗಳ ಸಂಘದ ಅಧ್ಯಕ್ಷ ಶಿವಣ್ಣ, ಪದಾಧಿಕಾರಿಗಳಾದ ಎಚ್.ಡಿ.ಸುರೇಶ್, ಕೃಷ್ಣಾ, ಶ್ರೀನಿವಾಸ್, ಮಂಜುನಾಥ್, ನರಸಿಂಹಮೂರ್ತಿ, ಸ್ವಾಮಿ, ಮಧು, ಮುತ್ತುರಾಜು, ತಿಮ್ಮಯ್ಯ, ಕೃಷ್ಣಪ್ಪ, ಚಿಕ್ಕಣ್ಣ, ಸೂರಿ, ದಾಸಪ್ಪ ಇದ್ದರು.