ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶ್ರೀಮತಿ ಪದ್ಮಾ ಜಿ.ಮಾದೇಗೌಡ ಪ್ರತಿಷ್ಠಾನ ಮತ್ತು ಭಾರತೀ ಕಾಲೇಜಿನ ಮಹಿಳಾ ಕೋಶ, ಐಕ್ಯುಎಸಿ ಸಹಯೋಗದಲ್ಲಿ ಭಾವನಾತ್ಮಕ ಸದೃಢತೆ ಮತ್ತು ಡಿಜಿಟಲ್ ಆರೋಗ್ಯ ಎಂಬ ಅರಿವು ಕಾರ್ಯಕ್ರಮದಲ್ಲಿ ಲೇಖಕಿ ನೇಮಿಚಂದ್ರ ಅವರನ್ನು ಅಭಿನಂದಿಸಲಾಯಿತು. 
ಮಂಡ್ಯ

ಡಿಜಿಟಲ್ ವಸ್ತುಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ

ಪ್ರಮುಖ ಮುಖ್ಯಾಂಶಗಳು

  • ಡಿಜಿಟಲ್ ವಸ್ತುಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ
ಕೆ.ಎಂ.ದೊಡ್ಡಿ: ಅತಿಯಾದ ಡಿಜಿಟಲ್ ವಸ್ತುಗಳ ಬಳಕೆಯಿಂದಾಗಿ ಯುವಜನಾಂಗದ ಆರೋಗ್ಯದ ಮೇಲೆ ಹಲವು ಪರಿಣಾಮಗಳು ಬೀರುತ್ತಿವೆ ಎಂದು ಸಂಪನ್ಮೂಲ ವ್ಯಕ್ತಿ, ಲೇಖಕಿ ನೇಮಿಚಂದ್ರ ಎಚ್ಚರಿಸಿದರು.
ಇಲ್ಲಿನ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶ್ರೀಮತಿ ಪದ್ಮಾ ಜಿ.ಮಾದೇಗೌಡ ಪ್ರತಿಷ್ಠಾನ ಮತ್ತು ಭಾರತಿ ಕಾಲೇಜಿನ ಮಹಿಳಾ ಕೋಶ, ಐಕ್ಯು ಎಸಿ ಸಹಯೋಗದಲ್ಲಿ ಭಾರತೀ ಎಜುಕೇಶನ್ ಟ್ರಸ್ಟ್‌ನ ಎಲ್ಲ ಅಂಗಸಂಸ್ಥೆಗಳ ಅಧ್ಯಾಪಕ-ಅಧ್ಯಾಪಕಕೇತರಿಗೆ ಆಯೋಜಿಸಿದ್ದ ‘ಭಾವನಾತ್ಮಕ ಸದೃಢತೆ ಮತ್ತು ಡಿಜಿಟಲ್ ಆರೋಗ್ಯ’ ಕುರಿತು ಉಪನ್ಯಾಸ ನೀಡಿದರು.
ಸೋಲೆಂಬುದು ಏನಿದ್ದರೂ ಅಲ್ಪ ವಿರಾಮಷ್ಟೇ. ಸೋಲಿನಾ ಆಚೆಗೂ, ನೂರು ಬಣ್ಣಗಳಿವೆ. ನಮ್ಮ ಬದುಕಿನ ನಿಘಂಟಿನಿಂದ ಸೋಲು ಪದವನ್ನು ಹೊರಗೆ ಎಸೆಯೋಣ. ಯಾವುದು ಸೋಲಲ್ಲೂ ಸವಾಲು ಇದೆ ಎಂಬುದನ್ನು ಎಂದು ತಿಳಿಸಿದರು.
ಡಿಜಿಟಲ್ ವಸ್ತುಗಳ ಬಳಕೆಗಳಿಂದ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಕುರಿತು ವಿವರವಾಗಿ ತಿಳಿಸಿಕೊಟ್ಟರು. ಸಣ್ಣ ಸಣ್ಣ ವಿಷಯಗಳಿಗೂ ಆತ್ಮಹತ್ಯೆಗೆ ಶರಣಾಗುತ್ತಿರುವ ಇಂದಿನ ಯುವ ಜನಾಂಗಕ್ಕೆ ಹಲವು ಅಂಗವಿಕಲ ಸಾಧಕಿಯರ ಸಾಧನೆಗಳನ್ನು ಪಿಪಿಟಿಯ ಮುಖಾಂತರ ಪ್ರದರ್ಶಿಸಿದರು.
ವಿಧಾನ ಪರಿಷತ್ ಸದಸ್ಯ, ಭಾರತೀ ವಿದ್ಯಾಸಂಸ್ಥೆಯ ಚೇರ‌್ಮನ್ ಮಧು ಜಿ.ಮಾದೇಗೌಡ ಮಾತನಾಡಿ, ಇಂದಿನ ಡಿಜಿಟಲ್ ಯುಗದ ಧಾಂವಂತದ ಬದುಕು ನಡೆಸುತ್ತಿರುವ ಎಲ್ಲರಿಗೂ ಸಹ ಇಂತಹ ಆತ್ಮಸ್ಥೈರ್ಯ ತುಂಬುವ ಮಾರ್ಗದರ್ಶನ ಅಗತ್ಯವಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಇತ್ತೀಚೆಗೆ ಚಂದ್ರನ ಮೇಲೆ ಪಾದರ್ಪಣೆ ಮಾಡಿರುವುದು ಇಂತಹ ಸಂಶೋಧಗಳನ್ನು ವಿದ್ಯಾರ್ಥಿಗಳು ಮಾಡುವಂತೆ ತಿಳಿಸಿದರು.
ನನ್ನ ತಂದೆ ಮಾಜಿ ಸಂಸದ ದಿ.ಜಿ.ಮಾದೇಗೌಡ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕಟ್ಟಿದ ಸಂಸ್ಥೆ ಶರವೇಗದಲ್ಲಿ ಬೆಳೆಯುತಿದ್ದು, ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉದ್ಯೋಗದಲ್ಲಿರುವುದು ಸಂಸ್ಥೆಯ ಹೆಗ್ಗಳಿಗೆ ಹಿಡಿದ ಕೈಗನ್ನಡಿ ಎಂದರು.
ಕಾರ್ಯಕ್ರಮವನ್ನು ಭಾರತೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಉದ್ಘಾಟಿಸಿದರು. ಇಒ ಆಶಯ್‌ಮಧು , ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ, ಮಹಿಳಾ ಕೋಶದ ಸಂಚಾಲಕಿ ಎಂ.ಮಮತಾ, ಸಹ ಸಂಚಾಲಕಿ ಎಚ್.ಪಿ. ಪ್ರತಿಮಾ, ಮಹಿಳಾ ಕೋಶದ ಎಲ್ಲ ಸದಸ್ಯರು, ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರರು ವಿದ್ಯಾರ್ಥಿಗಳು ಇದ್ದರು.