ಮಾದಾಪುರ ಗ್ರಾಮದ ನಿವಾಸಿ ಮುತ್ತುರಾಜು 
ಮಂಡ್ಯ

ಬೈಕ್‌ಗಳ ನಡುವೆ ಡಿಕ್ಕಿಯಾಗಿ ಸವಾರ ಸಾವು

ಎ. ಆರ್. ರಘುರಾಮ
ಹಲಗೂರು: ಎರಡು ಬೈಕ್‌ಗಳ ನಡುವೆ ಶುಕ್ರವಾರ ಡಿಕ್ಕಿ ಸಂಭವಿಸಿ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಾದಾಪುರ ಗ್ರಾಮದ ನಿವಾಸಿ ಮುತ್ತುರಾಜು (25) ಮೃತ ವ್ಯಕ್ತಿ.
ಕಾರ್ಯನಿಮಿತ್ತ ಬೈಕ್‌ನಲ್ಲಿ ಹಲಗೂರಿನಿಂದ ಮಳವಳ್ಳಿ ಕಡೆಗೆ ತೆರಳುತ್ತಿದ್ದಾಗ ಬೆಂಗಳೂರು ಕಡೆಯಿಂದ ಬೈಕ್ ನಡುವೆ ಹಾಡ್ಲಿ ಸರ್ಕಲ್‌ನಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.