ಮಂಡ್ಯ ಜಿಪಂ ಕಚೇರಿ ಮಿನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. 
ಮಂಡ್ಯ

ಜನರ ಸಮಸ್ಯೆ ಆಲಿಸಿದ ಸಿಇಒ: ನಿಯಮಾನುಸಾರ ಕ್ರಮ ತೆಗೆದುಕೊಳ್ಳುವ ಭರವಸೆ

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರ ದೂರು ಸ್ವೀಕರಿಸಿದ ಜಿಪಂ ಸಿಇಒ
  • ಸಂಬಂಧಿಸಿದ ತಾಪಂ ಹಾಗೂ ಗ್ರಾಪಂಗೆ ಹಸ್ತಾಂತರ
  • ತೆಗೆದುಕೊಂಡಿರುವ ಕ್ರಮ ಕುರಿತು ಮಾಹಿತಿ ಪರಿಶೀಲನೆ
ಮಂಡ್ಯ: ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಸೋಮವಾರ ಸಿಇಒ ಕೆ.ಆರ್.ನಂದಿನಿ ಜನರ ಸಮಸ್ಯೆ ಆಲಿಸಿದರು.
ವಿವಿಧ ತಾಲೂಕಿನಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ಮನವಿ ಮತ್ತು ದೂರು ಸಲ್ಲಿಸಿದರು. ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ, ಇ-ಸ್ವತ್ತು, ಒತ್ತುವರಿ ತೆರವು ಸಂಬಂಧ ಮನವಿ ಹಾಗೂ ಗ್ರಾ.ಪಂ. ಗಳಲ್ಲಿ ವಿವಿಧ ಯೋಜನೆಗಳಡಿ ಸರಿಯಾದ ಸವಲತ್ತು ದೊರಕುತ್ತಿಲ್ಲ ಮತ್ತು ವಿವಿಧ ಯೋಜನೆಗಳಡಿ ಹಣ ದುರುಪಯೋಗವಾಗಿದೆ ಎಂಬ ದೂರುಗಳು ಸ್ವೀಕೃತವಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕೆಲವು ದೂರುಗಳು ಬಂದ ಸಂದರ್ಭದಲ್ಲಿ ಅವುಗಳನ್ನು ನಿಯಮಾನುಸಾರ ಪರಿಶೀಲನೆ ನಡೆಸಲು ಕಾಲಾವಕಾಶ ಅಗತ್ಯವಿರುತ್ತದೆ. ಈ ಸಂಬಂಧ ಕ್ರಮ ತೆಗೆದುಕೊಳ್ಳಲು ನಿಯಮಾನುಸಾರ ಹಲವಾರು ಪ್ರಕ್ರಿಯೆಗಳಿದ್ದು, ಅದರಂತೆಯೇ ನಡೆದುಕೊಳ್ಳಬೇಕು. ಇದನ್ನು ವಿಳಂಬವೆಂದುಕೊಳ್ಳದೇ ಸಾರ್ವಜನಿಕರು ಸಹಕರಿಸಬೇಕು. ಸಭೆಯಲ್ಲಿ ಸ್ವೀಕೃತವಾದ ದೂರು ಮತ್ತು ಮನವಿಯನ್ನು ಸಂಬಂಧಿಸಿದ ತಾಪಂ ಹಾಗೂ ಗ್ರಾಪಂಗೆ ಕಳುಹಿಸಲಾಗುವುದು. ಅದಕ್ಕೆ ತೆಗೆದುಕೊಂಡಿರುವ ಕ್ರಮ ಕುರಿತು ಆಯಾ ತಾಪಂಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಈಗಾಗಲೇ ಮಳವಳ್ಳಿ ಮತ್ತು ನಾಗಮಂಗಲ ತಾಲೂಕಿನಲ್ಲಿ ಸಭೆ ಪೂರ್ಣಗೊಂಡಿದೆ ಎಂದರು.
ಈ ವೇಳೆ ಜಿಪಂ ಉಪಕಾರ್ಯದರ್ಶಿ(ಆಡಳಿತ) ಡಾ.ಶಿವಲಿಂಗಯ್ಯ, ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ) ಚಂದ್ರು, ಸಹಾಯಕ ಕಾರ್ಯದರ್ಶಿ(ಆಡಳಿತ) ರವೀಂದ್ರ, ಪಿಐಇಒ ಅನಿತಾ ಇತರರಿದ್ದರು.