ಮಳವಳ್ಳಿ ತಾಲೂಕು ಆಡಳಿತದ ವತಿಯಿಂದ ಭಾನುವಾರ ಆಯೋಜಿಸಿದ್ದ ಬಾಬು ಜಗಜೀವನ್ ರಾಮ್ 118ನೇ ಜಯಂತಿ ಆಚರಣೆ ಪ್ರಯುಕ್ತ ಬಾಬುಜಗಜೀವನ್ ರಾಮ್ ಅವರ ಭಾವಚಿತ್ರ ಮೆರವಣಿಗೆಗೆ ತಾಪಂ ಇಒ ಶ್ರೀನಿವಾಸ್ ಚಾಲನೆ ನೀಡಿದರು. ಉಮಾ, ನಾಗರತ್ನ, ಮಂಜುನಾಥ್, ಶಾಂತಕುಮಾರ್, ವೆಂಕಟೇಶ್, ರಮೇಶ್, ಶಿವಾನಂದ, ಅರುಣ್, ಸುರೇಶ್ ಇದ್ದರು.
- ತಾ.ಪಂ ರ್ವಾಹಕ ಅಧಿಕಾರಿ ಶ್ರೀನಿವಾಸ್ ಅಭಿಮತ
ಮಳವಳ್ಳಿ: ಸಮಾಜದಲ್ಲಿ ಹಿಂದುಳಿದ ವರ್ಗದವರ ಏಳಿಗೆಗಾಗಿ ತಮಗೆ ಸಿಕ್ಕ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡ ದೀಮಂತ ನಾಯಕ ಡಾ.ಜಗಜೀವನ್ ರಾಮ್ ಅವರು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ತಾಲೂಕು ಆಡಳಿತದ ವತಿಯಿಂದ ಆಯೊಜಿಸಿದ್ದ ಜಗಜೀವನ್ ರಾಮ್ ಅವರ 118ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಬಾಬು ಜಗಜೀವನ್ ರಾಮ್ ಅವರು ಮೇರು ವ್ಯಕ್ತಿತ್ವ ಉಳ್ಳವರಾಗಿದ್ದು, ಅವರ ಪಾರದರ್ಶಕ ಆಡಳಿತಗಳಿಂದ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಯಿತು ಎಂದರು.
ಬಿಇಒ ಉಮಾ ಮಾತನಾಡಿ, ಹಸಿವು ಮುಕ್ತ ರಾಷ್ಟ್ರವನ್ನಾಗಿಸಲು ದೇಶದಲ್ಲಿ ಆಹಾರ ಭದ್ರತೆಗಾಗಿ ಹಸಿರು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತರುವುದರ ಜತೆಗೆ ಜನ ಮಾನಸದಲ್ಲಿ ಉಳಿಸುವಂತಹ ಆಡಳಿತ ನೀಡಿದ ಜಗಜೀವನ್ ರಾಮ್ ಅವರು ಎಂದು ಸ್ಮರಿಸಿದರು.
ಸಮಾಜ ಕಲ್ಯಾಣಾಧಿಕಾರಿ ಸಂತೋಷ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ಸಾರ್ವಜಿನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಜಗಜೀವನ್ ರಾಮ್ ವೇದಿಕೆ ತಾಲೂಕು ಅಧ್ಯಕ್ಷ ನಡಕಲಪುರ ಮಂಜುನಾಥ್ , ಮುಖಂಡರಾದ ಬಿ.ಜಿ.ಪುರ ಶಾಂತಕುಮಾರ್, ವೆಂಕಟೇಶ್, ಹೂವಿನಕೊಪ್ಪಲು ಪ್ರಶಾಂತ್, ರಮೇಶ್, ಶಿವಾನಂದ, ಅರುಣ್, ಶ್ರೀನಿವಾಸ್, ಸುರೇಶ್ ಇದ್ದರು.