ಶ್ರೀರಂಗಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ತಹಸೀಲ್ದಾರ್ ಚೇತನ ಯಾದವ್, ಎಂ.ಎಲ್.ದಿನೇಶ್, ಎಂ.ನಂದೀಶ್, ಸೋಮಸುಂದರ್ ಇದ್ದರು. 
ಮಂಡ್ಯ

ಸಾಮಾಜಿಕ ಸುಧಾರಣೆಗೆ ಒತ್ತು ನೀಡಿದ್ದ ಪಾಳೇಗಾರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಪ್ರಶಂಸೆ
  • ಭಾವಚಿತ್ರಕ್ಕೆ ಪುಷ್ಪನಮನ
ಶ್ರೀರಂಗಪಟ್ಟಣ: ನಮ್ಮ ಭವ್ಯ ಬೆಂಗಳೂರು ವಿಶ್ವದೆದುರು ಪ್ರಮುಖ ತಂತ್ರಜ್ಞಾನದ ಹಬ್ ಆಗಿ ಬೆಳೆದು ಜಗತ್ತಿನಾದ್ಯಂತ ತಲೆಎತ್ತಿ ನಿಲ್ಲಲು ನಾಡಪ್ರಭು ಶ್ರೀ ಕೆಂಪೇಗೌಡರು ಆ ಕಾಲದಲ್ಲಿ ಹಾಕಿಕೊಟ್ಟ ಗಟ್ಟಿ ಬುನಾದಿಯೇ ಪ್ರಮುಖ ಕಾರಣ ಎಂದು ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತಿಯ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಮಾತನಾಡಿದರು.
ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧಿಯಾಗಿರುವ ಇಂದಿನ ಬೆಂಗಳೂರು ಮಹಾನಗರದ ನಿರ್ಮಾತೃ, ದೂರದೃಷ್ಟಿಯ ಆಡಳಿತಗಾರ ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಶಿಲ್ಪಿ ಮತ್ತು ವಿಜಯನಗರ ಸಾಮ್ರಾಜ್ಯದ ಪ್ರಮುಖ ಪಾಳೇಗಾರರಾಗಿರಲಿಲ್ಲ. ಅವರೊಬ್ಬ ಮಹಾನ್ ದೂರದೃಷ್ಟಿಯುಳ್ಳ ನಗರಾಭಿವೃದ್ಧಿ ಯೋಜಕರಾಗಿದ್ದರು.1537ರಲ್ಲಿ ಅವರು ಕಲ್ಪನೆ ಮಾಡಿದ ಸುಂದರ ತಾಣವೇ ಇಂದಿನ ಜಾಗತಿಕ ಮಟ್ಟದ ಬೆಂಗಳೂರು ನಗರ. ಕೆಂಪೇಗೌಡರು ನಗರವನ್ನು ನಿರ್ಮಿಸುವಾಗ ಕೇವಲ ಅರಮನೆ, ಕೋಟೆಗಳ ಕಡೆಗೆ ಗಮನ ಹರಿಸಲಿಲ್ಲ. ಬದಲಿಗೆ ಪ್ರಜೆಗಳ ಸುಗಮ ಜೀವನಕ್ಕಾಗಿ ವಾಣಿಜ್ಯ ಪೇಟೆಗಳು, ಕುಡಿಯುವ ನೀರಿಗಾಗಿ ಕೆರೆ-ಕಟ್ಟೆಗಳು ಹಾಗೂ ಆಧ್ಯಾತ್ಮಿಕ ನೆಮ್ಮದಿಗಾಗಿ ಸುಂದರ ದೇವಾಲಯಗಳನ್ನು ನಿರ್ಮಿಸಿದರು ಎಂದರು.
ತಹಸೀಲ್ದಾರ್ ಚೇತನ ಯಾದವ್, ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್.ದಿನೇಶ್, ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ನಂದೀಶ್, ನಿರ್ದೇಶಕ ಸೋಮಸುಂದರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಜೆ.ರವಿಶಂಕರ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜು, ನಿರ್ದೇಶಕ ತಡಗವಾಡಿ ಯತೀಶ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಗೌಡಹಳ್ಳಿ ದೇವರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ರಜನಿಕಾಂತ್, ಮುಖಂಡರಾದ ಬಿ.ಜೆ.ಸೋಮಶೇಖರ್, ಸರಿ ಸ್ವಾಮಿಗೌಡ, ಪಾಲಹಳ್ಳಿ ಟೆಂಪೋ ಪ್ರಕಾಶ್, ಕುದುರೆ ರಘು, ದಸಂಸ ಮುಖಂಡರಾದ ಗಂಜಾಂ ರವಿಚಂದ್ರು, ಕೆ.ಟಿ.ರಂಗಯ್ಯ ಇತರರು ಉಪಸ್ಥಿತರಿದ್ದರು.