ಮದ್ದೂರು ತಾಲೂಕಿನ ಕಬ್ಬಾರೆ ಗ್ರಾಮದಲ್ಲಿ ಜಲಕ್ರೀಡೆಯಾಡುತ್ತಿರುವ ಒಂಟಿ ಸಲಗ  
ಮಂಡ್ಯ

ಕಬ್ಬಾರೆ ಕೆರೆಯಲ್ಲಿ ಒಂಟಿ ಸಲಗ

ಪ್ರಮುಖ ಮುಖ್ಯಾಂಶಗಳು

  • ಗ್ರಾಮಸ್ಥರಲ್ಲಿ ಆತಂಕ
  • ಅರಣ್ಯ ಪ್ರದೇಶಕ್ಕೆ ವಾಪಸ್ ಕಳುಹಿಸಲು ಇಲಾಖೆಯಿಂದ ಕ್ರಮ
ಮದ್ದೂರು: ತಾಲೂಕಿ ಕಬ್ಬಾರೆ ಗ್ರಾಮದ ಕೆರೆಯಲ್ಲಿ ಆನೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಬುಧವಾರ ಮುಂಜಾನೆ ಚನ್ನಪಟ್ಟಣ ತಾಲೂಕಿನ ನರಿಕಲ್ಲು ಗುಡ್ಡ ಅರಣ್ಯಾ ಪ್ರದೇಶದಿಂದ ಬಂದ ಒಂಟಿ ಸಲಗ ಕಬ್ಬಾರೆ ಗ್ರಾಮದ ಕೆರೆಯಲ್ಲಿ ಬೀಡು ಬಿಟ್ಟಿದೆ.
ಆನೆಯನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ತಾಲೂಕು ವಲಯ ಅರಣ್ಯಾಧಿಕಾರಿ ಗವಿಯಪ್ಪ, ಉಪ ವಲಯ ಅರಣ್ಯಾಧಿಕಾರಿ ಕಾಂತರಾಜು, ಗಸ್ತು ಪಾಲಕರಾದ ವೀರೇಶ್ ಅಂಗಡಿ, ಚಿನ್ನಪ್ಪ ಸೇರಿದಂತೆ ಇತರೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲೆ ಮೊಕ್ಕಂ ಹೂಡುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿದ್ದಾರೆ.
ರಾತ್ರಿ ಹುಣಸೂರಿನ ಆನೆ ಕಾರ್ಯಪಡೆ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಯಾವುದೇ ರೀತಿಯ ತೊಂದರೆಯಾಗದಂತೆ ಆನೆಯನ್ನು ಅರಣ್ಯ ಪ್ರದೇಶಕ್ಕೆ ವಾಪಸ್ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ.