ಮದ್ದೂರಿನ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ 3 ವರ್ಷಗಳ ಕಾಲ ಮುಖ್ಯ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸಿ ಚೆನ್ನೈ ಸೇಲ್ಸ್ ಟ್ರೈನಿಂಗ್ ಸೆಂಟರ್‌ನ ಪ್ರಾಂಶುಪಾಲರಾಗಿ ಬಡ್ತಿ ಹೊಂದಿ ವರ್ಗಾವಣೆಗೊಂಡ ಕೆ.ರಾಜನ್ ಅವರಿಗೆ ಜೀವ ವಿಮಾ ಸಿಬ್ಬಂದಿ ವರ್ಗದಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಧನಪಾಲ ಶೆಟ್ಟಿ, ಸ್ವಾಮಿನಾಥನ್, ಎಂ.ಉದಯ್, ಸಿ.ಎಸ್.ವಾಸು. ಮುತ್ತುರಾಜು ಇದ್ದರು.
ಮದ್ದೂರು: ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ 3 ವರ್ಷಗಳ ಕಾಲ ಮುಖ್ಯ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸಿ ಚೆನ್ನೈ ಸೇಲ್ಸ್ ಟ್ರೈನಿಂಗ್ ಸೆಂಟರ್‌ನ ಪ್ರಾಂಶುಪಾಲರಾಗಿ ಬಡ್ತಿ ಹೊಂದಿ ವರ್ಗಾವಣೆಗೊಂಡ ಕೆ.ರಾಜನ್ ಅವರಿಗೆ ಜೀವ ವಿಮಾ ಸಿಬ್ಬಂದಿ ವರ್ಗದಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಎಲ್‌ಐಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಮದ್ದೂರು ಶಾಖೆ ರಾಜನ್ ಮಾರ್ಗದರ್ಶನದಲ್ಲಿ 15,138 ಪಾಲಿಸಿಗಳ ಸಂಗ್ರಹಣೆಯ ಮೂಲಕ 33 ಕೋಟಿ ರೂ.ಗೂ ಹೆಚ್ಚು ಪ್ರೀಮಿಯಂ ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೀಗಾಗಿ ಇವರ ಕಾರ್ಯದಕ್ಷತೆಯಿಂದಾಗಿ ಮೈಸೂರು ವಿಭಾಗದ ಮದ್ದೂರು ಶಾಖೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ವಿಮಾ ಸಲಹೆಗಾರರ ಸಂಘದ ಅಧ್ಯಕ್ಷ ಧನಪಾಲ ಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು.
ಕೆ.ರಾಜನ್ ಅವರ 33 ವರ್ಷಗಳ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಪ್ರತಿನಿಧಿಗಳು, ಸಿಬ್ಬಂದಿ ವರ್ಗ, ಪಾಲಿಸಿದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇವರ ನಿಸ್ವಾರ್ಥ ಸೇವೆ ಚೆನ್ನೈ ಸೇಲ್ಸ್ ಸೆಂಟರ್‌ಗೂ ಮುಂದುವರಿಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನೂತನ ಮುಖ್ಯ ಪ್ರಬಂಧಕ ಸ್ವಾಮಿನಾಥನ್, ಉಪ ವ್ಯವಸ್ಥಾಪಕ ಎಂ.ಉದಯ್, ಪ್ರತಿನಿಧಿಗಳ ಸಂಘದ ಅಧ್ಯಕ್ಷ ಸಿ.ಎಸ್.ವಾಸು, ಮೈಸೂರು ವಿಭಾಗದ ಮುಖ್ಯ ಜೀವ ವಿಮಾ ಸಲಹೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮುತ್ತುರಾಜು, ನಿರ್ದೇಶಕರಾದ ತಿರುಮಲೇಶ್, ರಾಮಚಂದ್ರ, ಚೆನ್ನಪ್ಪ, ಕೃಷ್ಣೆಗೌಡ, ಸವಿತಾ, ವಾಣಿ ಹಾಗೂ ಸಿಬ್ಬಂದಿ ಇದ್ದರು.