ಮದ್ದೂರು: ತಾಲೂಕಿನ ಎಲೆದೊಡ್ಡಿ ಗ್ರಾಮದಲ್ಲಿ ಗುರುವಾರ ರಾತ್ರಿ ಚಿರತೆ ದಾಳಿ ಮಾಡಿ ಕರುವನ್ನು ತಿಂದು ಹಾಕಿದೆ.
ಗ್ರಾಮದ ರೈತ ಶೇಖರ್ ಎಂಬುವರಿಗೆ ಸೇರಿದ್ದ ಕರುವನ್ನು ಎದಿನಂತೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು, ಚಿರತೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರುವನ್ನು ಗ್ರಾಮದ ಹಳ್ಳದ ಸಮೀಪದ ಎಳೆದೊಯ್ದು ತಿಂದು ಹಾಕಿದೆ.
ಅರಣ್ಯಾಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಚಿರತೆ ಸೆರೆ ಹಿಡಿಯಲು ಬೋನು ಇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಎಲೆದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಚಿರತೆಗಳ ಉಪಟಳ ತಡೆಯಲು ಅರಣ್ಯಾಕಾರಿಗಳು ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರ ಆತಂಕ ದೂರ ಮಾಡಬೇಕೆಂದು ಗ್ರಾಪಂ ಸದಸ್ಯರಾದ ಕೆ.ಎಸ್.ಬೀರೇಶ್, ಕೆ.ಸಿ.ರಾಘವೇಂದ್ರ ಆಗ್ರಹಿಸಿದ್ದಾರೆ.