ಚಿರತೆ ದಾಳಿಯಿಂದ ನಷ್ಟಕ್ಕೊಳಗಾದ ರೈತ ಪ್ರೇಮೇಶ್ ಅವರಿಗೆ ಆರ್.ಟಿ.ಒ ಮಲ್ಲಿಕಾರ್ಜುನ್ ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚಹಳ್ಳಿ ಹೋಬಳಿ ನಾಯಕನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಎಂಟು ಕುರಿಗಳು ಬಲಿಯಾಗಿದ್ದು, ರೈತ ಪ್ರೇಮೇಶ್ ಅವರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಸಾಲ ಮಾಡಿ ಕುರಿ ಸಾಕಣೆ ನಡೆಸುತ್ತಿದ್ದ ಪ್ರೇಮೇಶ್ ಅವರ ಕೊಟ್ಟಿಗೆಗೆ ಇತ್ತೀಚೆಗೆ ನುಗ್ಗಿದ ಚಿರತೆ ಕುರಿಗಳ ಮೇಲೆ ದಾಳಿ ನಡೆಸಿ ಎಂಟು ಕುರಿಗಳನ್ನು ಕೊಂದು ಹಾಕಿದೆ.
ಘಟನೆಯ ಮಾಹಿತಿ ತಿಳಿದ ಆರ್.ಟಿ.ಒ ಮಲ್ಲಿಕಾರ್ಜುನ್ ಅವರು ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಶ್ರೀಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ನೀಡಿದರು.