ಮದ್ದೂರು ನಗರ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಪೋಲಿಯೋ ಲಸಿಕೆ ಅಭಿಯಾನಕ್ಕೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಡಾ.ರವಿಶಂಕರ್, ಶ್ರೀನಿವಾಸ್, ತಿಪ್ಪೂರು ರಾಜೇಶ್, ಬಿ.ಡಿ.ಹೊನ್ನೇಗೌಡ, ಸಿದ್ದರಾಜು ಇದ್ದರು.
ಮದ್ದೂರು: ರಾಷ್ಟ್ರೀಯ ಪೋಲಿಯೋ ಲಸಿಕಾ ದಿನದ ಅಂಗವಾಗಿ ನಗರದ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ರೋಟರಿ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪೋಲಿಯೋ ಲಸಿಕಾ ಅಭಿಯಾನಕ್ಕೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಿ ಮಕ್ಕಳಿಗೆ ಪೋಲಿಯೋ ಬಾರದಂತೆ ಪಾಲಕರು ನೋಡಿಕೊಳ್ಳಬೇಕೆಂದು ತಿಳಿಸಿದರು.
ಪೋಲಿಯೋ ಲಸಿಕೆ ಹಾಕಿಸಲು ತಾಲೂಕಿನಾದ್ಯಂತ 115 ಬೂತ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಲಸಿಕೆ ಹಾಕಲು 228 ತಂಡಗಳನ್ನು ರಚನೆ ಮಾಡಿದ್ದು, 460 ಮಂದಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಲಸಿಕೆ ಹಾಕಲು ಸಹಕಾರ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪಾಲಕರು ಹತ್ತಿರದ ಬೂತ್‌ಗಳ ಬಳಿ ತೆರಳಿ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದದರು. ತಾಲೂಕು ಅರೋಗ್ಯಾಧಿಕಾರಿ ಡಾ.ರವಿಶಂಕರ್ ಮಾತನಾಡಿ, ರೋಟರಿ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಬಿ.ಡಿ.ಹೊನ್ನೇಗೌಡ, ವಲಯ ರಾಯಭಾರಿ ತಿಪ್ಪೂರು ರಾಜೇಶ್, ಸಹಾಯಕ ಪಾಲಕಿ ಅನುಪಮ, ಮಾಜಿ ಅಧ್ಯಕ್ಷ ಶಶಿಗೌಡ, ನಗರ ಸಭಾ ಮಾಜಿ ಸದಸ್ಯ ಸಿದ್ದರಾಜು ಇತರರಿದ್ದರು.