ಪಾಂಡವಪುರ: ತಾಲೂಕಿನ ಕನಗನಹಳ್ಳಿ ಸಮೀಪ ಫೆ.22 ರಂದು ನಡೆದ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದಾರೆ. 
ಮಂಡ್ಯ

ಮಾರಣಾಂತಿಕ ಹಲ್ಲೆ 11 ಆರೋಪಿಗಳ ಬಂಧನ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • accused arrested
ಪಾಂಡವಪುರ: ತಾಲೂಕಿನ ಕನಗನಹಳ್ಳಿ ಸಮೀಪ ಫೆ.22 ರಂದು ನಡೆದ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜಕೀಯ, ಹಳೇ ವೈಷಮ್ಯ ವಿಚಾರವಾಗಿ ಕೆ.ಆರ್.ಪೇಟೆ ತಾಲೂಕಿನ ಬೊಮ್ಮಲಪುರ ಗ್ರಾಮದ ಶ್ರೀೀಕಂಠಪ್ಪ ಮತ್ತು ಕಾಳಪ್ಪ ಕುಟುಂಬಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಫೆ.22 ರಂದು ಶ್ರೀಕಂಠಪ್ಪ ಅವರ ಮಗ ಬಿ.ಎಸ್.ಪ್ರಕಾಶ್ ಮತ್ತು ನವೀನ್‌ಕುಮಾರ್ ಅವರ ಮೇಲೆ ಕಾಳಪ್ಪ ಅವರ ಪುತ್ರ ಪುಟ್ಟರಾಜು ಹಾಗೂ 14 ಸದಸ್ಯರು ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.
ಈ ಸಂಬಂಧ ಗಾಯಾಳು ಬಿ.ಎಸ್.ಪ್ರಕಾಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪಾಂಡವಪುರ ಪೊಲೀಸರು ಕೃತ್ಯ ನಡೆದ ದಿನವೇ ಗಿರೀಶ್ ಎಂಬಾತನನ್ನು ಬಂಧಿಸಿದ್ದರು. ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭರಾಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ ಪಿ ಯು.ಡಿ.ಕೃಷ್ಣಕುಮಾರ್ ಉಸ್ತುವಾರಿಯಲ್ಲಿ ಪಿಐಗಳಾದ ಶರತ್ ಕುಮಾರ್, ಆನಂದಕುಮಾರ್, ಪಿಎಸ್‌ಐಗಳಾದ ಆರ್.ಬಿ.ಉಮೇಶ್, ರಮೇಶ್ ಕರ್ಕಿಕಟ್ಟಿ, ವಿನೋದ್ ಕುಮಾರ್ ಸಿಬ್ಬಂದಿ ರಾಜೇಶ್, ಜೆ.ಶೋಭಾ, ಗಿರೀಶ್, ದಿನೇಶ್, ರವಿಕಿರಣ್, ಲೋಕೇಶ್, ತೌಸಿಫ್, ಶಿವರಾಜ, ಶಂಕರ್ ರಾಥೋಡ್, ದಿನೇಶ್, ಶರತ್, ಸಂತೋಷ್, ರವೀಶ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.