ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ.ಪುಟ್ಟರಾಜು ಅವರನ್ನು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಶುಕ್ರವಾರ ಭೇಟಿ ಮಾಡಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಕೆ.ಟಿ.ಶ್ರೀಕಂಠೇಗೌಡ, ಡಾ.ಪುಟ್ಟರಾಜು ಅವರು ಮೂಲತಃ ತಾಂತ್ರಿಕ ಕ್ಷೇತ್ರದಿಂದ ಬಂದವರಾಗಿದ್ದಾರೆ. ಹೊಸ ಕನಸನ್ನು ಇಟ್ಟುಕೊಂಡ ಈ ಭಾಗದ ಜನರಿಗೆ ಅದರಲ್ಲೂ ವಿಶೇಷವಾಗಿ ಯುವಕರಿಗೆ ಉದ್ಯೋಗಾಧಾರಿತ ವಿಶೇಷ ಕೌಶಲ ಶಿಕ್ಷಣ ಕೊಡುವ ಉದ್ದೇಶ ಇಟ್ಟುಕೊಂಡು ಬಂದಿದ್ದಾರೆ. ಅವರ ಕನಸು ಸಾಕಾರಗೊಳ್ಳಲಿ. ಈ ಮೂಲಕ ವಿಶ್ವವಿದ್ಯಾಲಯ ಎತ್ತರಕ್ಕೆ ಬೆಳೆಯಲಿ. ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗುವ ಅವಕಾಶ ಆಗಲಿ ಎಂದು ಹಾರೈಸಿದರು.
ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್, ವಕೀಲ ಕುಮಾರ್, ಬಿಳೀಗೌಡ, ಪಟೇಲ, ವಿಶ್ವ, ಶಂಭುಲಿಂಗೇಗೌಡ ಇತರರಿದ್ದರು.