ಜಿಲ್ಲೆ

ಜಿಲ್ಲಾ ಸಮಿತಿ ಯಥಾವತ್ತಿನಂತೆ ಮುಂದುವರೆಯಲಿವೆ: ಮಂಡ್ಯ ತಾಲೂಕು ಕಸಾಪ ಅಧ್ಯಕ್ಷ ಚಂದ್ರಲಿಂಗು ಹೇಳಿಕೆ

ಮಂಡ್ಯ: ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಅಧ್ಯಕ್ಷರ ನಾಮ ನಿರ್ದೇಶನ ಮಾಡಿ ನೂತನ ಕಾರ್ಯಕಾರಿ ಮಂಡಳಿ ರಚನೆಗೆ ನೀಡಿದ ನಿರ್ದೇಶನಕ್ಕೆ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಮಂಡ್ಯ ತಾಲೂಕು ಕಸಾಪ ಅಧ್ಯಕ್ಷ ಚಂದ್ರಲಿಂಗು ತಿಳಿಸಿದರು.

ನೂತನ ಕಾರ್ಯಕಾರಿ ಮಂಡಳಿ ರಚನೆಗೆ ನೀಡಿದ ನಿರ್ದೇಶನದಿಂದ ಬೈಲಾ ನಿಬಂಧನೆಗಳ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿದ್ದು, ಇದಕ್ಕೆ ಉಚ್ಛನ್ಯಾಯಾಲಯವು ತಡೆಯಾಜ್ಞೆ ನೀಡಿದ ಹಿನ್ನಲೆ ಮೊದಲಿನಂತೆ ಜಿಲ್ಲೆಯ ಕಾರ್ಯಕಾರಿ ಮಂಡಳಿ ಹಾಗೂ ಎಲ್ಲ ತಾಲೂಕು ಮತ್ತು ಹೋಬಳಿ ಸಮಿತಿಗಳು ಯಥಾವತ್ತಿನಂತೆ ಮುಂದುವರೆಯಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಳವಳ್ಳಿ ತಾಲೂಕು ಅಧ್ಯಕ್ಷ ಎಲ್.ಚೇತನ್‌ಕುಮಾರ್, ಪಾಂಡವಪುರ ತಾಲೂಕು ಅಧ್ಯಕ್ಷ ಪ್ರಕಾಶ್, ಪದಾಧಿಕಾರಿಗಳಾದ ಅಂಜನಾ ಶ್ರೀಕಾಂತ್, ಪ್ರಮೀಳಾ, ಸುವರ್ಣವತಿ, ರತ್ನಾಕರ್ ಇದ್ದರು.