ಮದ್ದೂರಿನಲ್ಲಿ ಆಯೋಜಿಸಿದ್ದ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಿ.ವಿ.ಮಂಜುನಾಥ್, ನಾಗಣ್ಣ, ಎಚ್.ಎಸ್.ರಾಜಶೇಖರ್, ವೀರಭದ್ರಸ್ವಾಮಿ, ಗಂಗಾಧರ್, ತೋಂಟದಾರ್ಯ, ರಾಜಶೇಖರ್ ಇದ್ದರು.  
ಜಿಲ್ಲೆ

ಶ್ರೀ ಬಸವೇಶ್ವರ ಸಹಕಾರ ಸಂಘಕ್ಕೆ ನಿವೇಶನ ಖರೀದಿಸಿ ಕಟ್ಟಡ ನಿರ್ಮಾಣ

ಮಾದೇಶ್ ತಿ.ನರಸೀಪುರ

ಮದ್ದೂರು: ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ನಿವೇಶನ ಖರೀದಿಸಿ ಕಟ್ಟಡ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅಧ್ಯಕ್ಷ ಬಿ.ವಿ.ಮಂಜುನಾಥ್ ಹೇಳಿದರು.


ಪಟ್ಟಣದ ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲೂ ಎಲ್ಲರ ಸಹಕಾರದಿಂದ ಉತ್ತಮ ಮಟ್ಟದಲ್ಲಿ ಸಹಕಾರ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಯಲಾಗುವುದು ಎಂದು ತಿಳಿಸಿದರು.
ಸಂಘದ ಹಿರಿಯ ನಾಗರಿಕರಾದ 88 ವರ್ಷದ ನಾಗಣ್ಣ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಎಚ್.ಎಸ್.ರಾಜಶೇಖರ್, ಉಪಾಧ್ಯಕ್ಷ ವೀರಭದ್ರಸ್ವಾಮಿ, ನಿರ್ದೇಶಕರಾದ ಗಂಗಾಧರ್, ತೋಂಟದಾರ್ಯ, ರಾಜಶೇಖರ್, ಎಚ್.ಬಿ.ಸ್ವಾಮಿ, ಎಂ.ವೀರೇಂದ್ರ, ಪಿ.ಬಿ.ಮಾದೇವಸ್ವಾಮಿ, ಪಿ.ತ್ರಿವೇಣಿ, ಎಸ್.ಸಿದ್ದಮ್ಮ, ಬಸವರಾಜಪ್ಪ, ಸಿ.ಜಿ.ಗೌರಿಶಂಕರ್, ನಾಮ ನಿರ್ದೇಶಕರಾದ ಎಂ.ಸಿದ್ದಲಿಂಗ ಪ್ರಸಾದ್, ವೈ.ಬಿ.ಶ್ರೀಕಂಠಸ್ವಾಮಿ, ಸಂಘದ ಕಾರ್ಯನಿರ್ವಹಣಾಧಿಕಾರಿ ರಾಜಮಣಿ ಇದ್ದರು.