ಜಿಲ್ಲೆ

ಐಕ್ಯತೆಯ ಬದುಕಿನಿಂದ ನೆಮ್ಮದಿಯ ಜೀವನ

reportermys

ಮಂಡ್ಯ: ದೇಶದ ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕಬೇಕು ಎಂದು ಮಂಡ್ಯ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ದೇವರಾಜೇಗೌಡ ಹೇಳಿದರು.
ನಗರದ ನೆಹರು ಯುವ ಕೇಂದ್ರ(ಎನ್‌ವೈಕೆ) ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ, ಜಿಲ್ಲಾಡಳಿತ, ಜಿಪಂ, ವಿಕಸನ ಸಂಸ್ಥೆ, ಅನನ್ಯ(ಹಾರ್ಟ್) ಸಂಸ್ಥೆ ಹಾಗೂ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ರಾಷ್ಟ್ರೀಯ ಕೋಮು ಐಕ್ಯತಾ ದಿವಸ ಹಾಗೂ ಸಪ್ತಾಹ’ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಸಮಾಜದಲ್ಲಿರುವ ಜಾತಿ, ಧರ್ಮ, ಭಾಷೆಗಳ ನಡುವೆ ಬದುಕುತ್ತಿದ್ದಾನೆ. ಆದರೆ ಈ ರೀತಿಯ ಬದುಕಿನಲ್ಲಿ ಸಾಮರಸ್ಯ ಅವಶ್ಯಕವಾಗಿದೆ. ಎಲ್ಲರೂ ಐಕ್ಯತೆಯಿಂದ ಜೀವನ ನಡೆಸಬೇಕು. ಇಂದಿನ ಯುವಜನತೆಗೆ ರಾಷ್ಟ್ರೀಯ ಕೋಮು ಐಕ್ಯತಾ ವಿಚಾರಗಳ ಕುರಿತು ಅರಿವು ಬೇಕಾಗಿದೆ. ಧರ್ಮ-ಧರ್ಮದ ನಡುವೆ ಬಾಳುತ್ತಿರುವ ಜನತೆ ಒಗ್ಗಟ್ಟು, ರಾಷ್ಟ್ರೀಯತೆ, ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತಿಗೊಳಿಸಬೇಕಿದೆ ಎಂದರು.
ನೆಹರು ಯುವಕೇಂದ್ರದ ಲೆಕ್ಕಾಧಿಕಾರಿ ಬಸವರಾಜು, ರಾಷ್ಟ್ರೀಯ ಯುವಪ್ರಶಸ್ತಿ ಪುರಸ್ಕೃತೆ ಅನುಪಮಾ, ಜಿಲ್ಲಾ ಕಾರಾಗೃಹದ ಅಧೀಕ್ಷಕ ಅಂಬೇಕರ್, ಉಪ ಅರಣ್ಯಾಧಿಕಾರಿ ವೆಂಕಟೇಶ್, ವಕೀಲ ತಿರುಮಲಸ್ವಾಮಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಬ್ಬನಹಳ್ಳಿ ಕುಮಾರ್ ಇತರರಿದ್ದರು.