ಕೆ.ಎಂ.ದೊಡ್ಡಿ : ತಾಂತ್ರಿಕ ವಿದ್ಯಾರ್ಥಿಗಳು ಸಮಯ ಪ್ರಜ್ಞೆ ರೂಢಿಸಿಕೊಂಡು ಹೊಸ ಅವಿಷ್ಕಾರಗಳತ್ತ ಚಿತ್ತ ಹರಿಸಬೇಕು ಎಂದು ಬೆಂಗಳೂರಿನ ಎಕ್ಸೆಲ್ ಸಾಫ್ಟ್ ಟೆಕ್ನಾಲಜಿಯ ಮಾನವ ಸಂಪನ್ಮೂಲ ಸಲಹೆಗಾರ ಹ್ಯಾರಿಸ್ ಅಡಿವೇಡ್ ತಿಳಿಸಿದರು.
ಇಲ್ಲಿನ ಭಾರತೀ ವಿದ್ಯಾಸಂಸ್ಥೆಯ ಕುವೆಂಪು ಸಭಾಗಂಣದಲ್ಲಿ ಜಿ. ಮಾದೇಗೌಡ ತಾಂತ್ರಿಕ ಕಾಲೇಜು ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮ ಮತ್ತು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇದು ಸ್ಪರ್ಧಾತ್ಮಕ ಯುಗ. ಹಾಗಾಗಿ ಉತ್ತಮ ಸಾಧನೆ ಮೂಲಕ ಗುರಿ ಮುಟ್ಟಲು ಪ್ರತಿಯೊಬ್ಬರೂ ಸ್ಫರ್ಧೆಯಲ್ಲಿ ತೊಡಗಲೇಬೇಕಾಗಿರುವುದು ಅನಿವಾರ್ಯವಾಗಿದೆ. ತಾಂತ್ರಿಕ, ವೈದ್ಯಕೀಯ ಸೇರಿದಂತೆ ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಅಲ್ಲಿ ಸ್ಫರ್ಧೆ ಅನಿವಾರ್ಯವಾಗಿದೆ ಎಂದರು.
ವಿದ್ಯಾರ್ಥಿಗಳು ಅತಿಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗುವುದರೊಂದಿಗೆ ವಿವಿಧ ಕೌಶಲ ಅಳವಡಿಸಿಕೊಂಡಾಗ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಅಧ್ಯಾತ್ಮ, ಸಾಮಾಜಿಕ, ಸಾಂಸ್ಕೃತಿಕ, ವೈಜ್ಞಾನಿಕ ಅಂಶಗಳನ್ನು ವಿದ್ಯಾರ್ಥಿ ಹಂತದಿಂದಲೇ ತಿಳಿದುಕೊಳ್ಳುವುದು ಉತ್ತಮ ಎಂದರು.