ಮಂಡ್ಯ : ಮನುಷ್ಯರು ಸೀಮಂತ ಕಾರ್ಯಕ್ರಮ ಮಾಡೋದು ಸಾಮಾನ್ಯ. ಆದರೆ ಮಂಡ್ಯ ತಾಲ್ಲೂಕಿನ ಯಲಿಯೂರು ಗ್ರಾಮದಲ್ಲೊಂದು ಫ್ಯಾಮಿಲಿ ಮುದ್ದಿನ ಸಾಕು ಪ್ರಾಣಿಗೆ ಸೀಮಂತ ನಡೆಸುವ ಮೂಲಕ ಗಮನ ಸೆಳೆದಿದೆ.
ಗ್ರಾಮದ ಮಾನಸ ಎಂಬುವವರು ತಮ್ಮ ಮನೆಯ ಸಾಕು ನಾಯಿ ಲಾಸಿ ಹೆಸರಿನ ಶ್ವಾನಕ್ಕೆ ಸೀಮಂತ ನಡೆಸುವ ಮೂಲಕ ಕುಟುಂಬ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಲ್ಯಾಬ್ ತಳಿಯ ಶ್ವಾನವನ್ನು ಸಾಕಿದ್ದ ಕುಟುಂಬ ಗರ್ಭಿಣಿಯಾದ ಹಿನ್ನಲೆ ಗರ್ಭಿಣಿ ಮಹಿಳೆಯರ ರೀತಿ ಸಾಂಪ್ರದಾಯಿಕವಾಗಿ ಶ್ವಾನಕ್ಕೆ ಸೀಮಂತ ಕಾರ್ಯ ಮಾಡಿ ಗಮನ ಸೆಳೆದಿದ್ದಾರೆ.
ಶ್ವಾನಕ್ಕೆ ಬಟ್ಟೆ ಧರಿಸಿ ತೊಡಿಸಿ, ಕುಂಕುಮ ಇಟ್ಟು, ಹೂವಿನ ಹಾರ ಹಾಕಿ ಸೀಮಂತ ಕಾರ್ಯ ನಡೆಸಿದೆ. ಸಾಂಪ್ರದಾಯಿಕವಾಗಿ ಯಲಿಯೂರು ಗ್ರಾಮದಲ್ಲಿಶ್ವಾನದ ಸೀಮಂತ ಕಾರ್ಯ ನಡೆದಿದೆ.
ಸದ್ಯ 7 ಗಂಡು ಮರಿಗೆ ಜನ್ಮ ನೀಡಿರುವ ಲಾಸಿ ಶ್ವಾನ. ತನ್ನ 7 ಗಂಡು ಮರಿಗಳು ಹಾಗೂ ಕುಟುಂಬಸ್ಥರು ಜೊತೆ ಆಡಿಕೊಂಡು ಖುಷಿಯಿಂದಿದೆ. ಪ್ರೀತಿಯಿಂದ ಮನೆಯಲ್ಲಿ ಮಗಳ ರೀತಿ ಸಾಕಿದ್ದೇವೆ ಎನ್ನುತ್ತಾರೆ ಕುಟುಂಬಸ್ಥರು.