ರಾಯಚೂರಿನ ಮಾ ಆಶಾಪುರ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದಿಂದ ಬುಧವಾರ ಸಂಜೆ ಎಂಎಸ್‌ಎಂಇ ಪಾವತಿ ಮತ್ತು ುಡ್ ಲೈಸನ್ಸ್ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಆಹಾರ ಸುರಕ್ಷತಾ ಅಕಾರಿ ಡಿ.ಅಮೃತ ಮಾತನಾಡಿದರು. ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಕಮಲಕುಮಾರ ಜೈನ್, ಕಾರ್ಯದರ್ಶಿ ಜಂಬಣ್ಣ ಯಕ್ಲಾಸಪುರ, ಮಾಜಿ ಅಧ್ಯಕ್ಷ ತ್ರಿವಿಕ್ರಮ ಜೋಷಿ, ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ರಾಮಚಂದ್ರ ಪ್ರಭು ಇದ್ದರು. 
ಜಿಲ್ಲೆ

ವ್ಯಾಪಾರ, ಉದ್ದಿಮೆಗಳಿಗೆ ಲೈಸನ್ಸ್ ಪಡೆಯುವುದು ಕಡ್ಡಾಯ

ರಾಯಚೂರು: ಪ್ರತಿಯೊಂದು ವ್ಯಾಪಾರ, ಉದ್ದಿಮೆಗಳನ್ನು ಪ್ರಾರಂಭಿಸುವಾಗ ಲೈಸನ್ಸ್ ಪಡೆಯುವುದು ಕಡ್ಡಾಯವಾಗಿದ್ದು, ಎಲ್ಲರೂ ಲೈಸನ್ಸ್ ಪಡೆದು ನಿಯಮಾನುಸಾರ ತೆರಿಗೆ ಪಾವತಿಸಿ ಸಹಕಾರ ನೀಡಬೇಕು ಎಂದು ಆಹಾರ ಸುರಕ್ಷತೆ ಪ್ರಮಾಣಿತ ಪ್ರಾಕಾರದ ಜಿಲ್ಲಾ ಅಕಾರಿ ಡಾ.ಡಿ.ಪ್ರಕಾಶ ಪುಣ್ಯಶೆಟ್ಟಿ ತಿಳಿಸಿದರು.
ಸ್ಥಳೀಯ ಮಾ ಆಶಾಪುರ ಸಭಾಂಗಣದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘ ಮತ್ತು ಲೆಕ್ಕ ಪರಿಶೋಧಕರ ಸಂಘದಿಂದ ಬುಧವಾರ ಸಂಜೆ ಏರ್ಪಡಿಸಿದ್ದ ಎಂಎಸ್‌ಎಂಇ ಪಾವತಿ ನಿಯಮಗಳು ಮತ್ತು ಎ್ಎಸ್‌ಎಐ ುಡ್ ಲೈಸನ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಸ್ತೆ ಬದಿ ವ್ಯಾಪಾರಸ್ಥರು ಮತ್ತು ಹೋಟೆಲ್ ವ್ಯಾಪಾರಸ್ಥರು ಶುಚಿತ್ವ ಕಾಪಾಡಿಕೊಂಡು ಜನರಿಗೆ ಆರೋಗ್ಯಕರ ಆಹಾರ ಪದಾರ್ಥಗಳನ್ನು ನೀಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಬೇಕು. ನಿಯಮಾನುಸಾರ ಲೈಸನ್ಸ್ ಪಡೆದು ವ್ಯಾಪಾರ ಆರಂಭಿಸಬೇಕು ಎಂದು ಸಲಹೆ ನೀಡಿದರು.
ಆಹಾರ ಸುರಕ್ಷತಾ ಅಕಾರಿ ಡಿ.ಅಮೃತ ಮಾತನಾಡಿ, ಹೋಟೆಲ್ ಉದ್ದಿಮೆದಾರರು ಜನರ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗಿದೆ. ಕೆಲಸಗಾರರ ಕೈಗೆ ಗ್ಲೌಸ್, ತಲೆಗೆ ಟೋಪಿ ಧರಿಸಬೇಕು. ಕೆಲಸಗಾರರು ವೈದ್ಯಕೀಯ ಚಿಕಿತ್ಸೆ ಪ್ರಮಾಣ ಪತ್ರ ಪಡೆದಿರಬೇಕು.
ಕೆಮ್ಮು, ಅಸ್ತಮಾ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳಿಗೆ ಕೆಲಸಗಾರರು ತುತ್ತಾಗಿರದಂತೆ ನೋಡಿಕೊಳ್ಳಬೇಕು. ಬಳಸುವ ಪದಾರ್ಥಗಳ್ಲಲಿ ಯಾವುದೇ ರೀತಿಯ ಕಲಬೆರಕೆ ಸಾಮಗ್ರಿ ಬಳಕೆ ಮಾಡಬಾರದು. ನಿಯಮ ಉಲ್ಲಂಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲೆಕ್ಕ ಪರಿಶೋಧಕ ಯೋಗೇಶ ಎಂಎಸ್‌ಎಂಇ ಪಾವತಿ ಕುರಿತು ಮಾಹಿತಿ ನೀಡಿದರು. ನಂತರ ಅಕಾರಿಗಳು ಮತ್ತು ಉದ್ದಿಮೆದಾರರ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಕಮಲಕುಮಾರ ಜೈನ್, ಕಾರ್ಯದರ್ಶಿ ಜಂಬಣ್ಣ ಯಕ್ಲಾಸಪುರ, ಮಾಜಿ ಅಧ್ಯಕ್ಷ ತ್ರಿವಿಕ್ರಮ ಜೋಷಿ, ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ರಾಮಚಂದ್ರ ಪ್ರಭು ಹಾಗೂ ಉದ್ದಿಮೆದಾರರು ಉಪಸ್ಥಿತರಿದ್ದರು.