ಸಾಮೂಹಿಕ ವಾಹನ ಪೂಜಾ ಧಾರ್ಮಿಕ ಅನುಷ್ಠಾನಕ್ಕೆ ಶಿರ್ವ ಪೊಲೀಸ್ ಠಾಣಾಧಿಕಾರಿ ಸಕ್ತಿವೇಲು ಚಾಲನೆ ನೀಡಿದರು.  
ಜಿಲ್ಲೆ

ಸಾರಿಗೆ ನಿಯಮ ಕಡ್ಡಾಯ ಪಾಲನೆ

ಇಂದಿರಾ ಎನ್ ಕೆ

ಶಿರ್ವ: ವಾಹನ ಚಲಾಯಿಸುವಾಗ ಸಾರಿಗೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಾಲನೆ ಶ್ರದ್ಧಾಭಕ್ತಿಯಿಂದ ನಿರ್ವಹಿಸಿದರೆ ಅಪಘಾತ ರಹಿತವಾಗಿ ಸುರಕ್ಷಿತ ಚಾಲನೆ ಸಾಧ್ಯ ಎಂದು ಶಿರ್ವ ಪೊಲೀಸ್ ಠಾಣಾಧಿಕಾರಿ ಸಕ್ತಿವೇಲು ಹೇಳಿದರು.

ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ರಾಜಾಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ಶನಿವಾರ ಸಾಮೂಹಿಕ ವಾಹನ ಪೂಜಾ ಧಾರ್ಮಿಕ ಅನುಷ್ಠಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರೀಕ್ಷೇತ್ರ ವೈದಿಕರಾದ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಜರುಗಿತು. ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು, ನಿಕಟಪೂರ್ವ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಸಡಂಬೈಲು, ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಮಾಜಿ ಅಧ್ಯಕ್ಷ ಪಿ.ದಯಾನಂದ ಕಾಮತ್ ಮೂಡುಬೆಳ್ಳೆ, ಸದಸ್ಯರಾದ ದೇವದಾಸ್ ಪಾಟ್ಕರ್ ಮುದರಂಗಡಿ, ರಾಮದಾಸ್ ಪ್ರಭು, ರಾಘವೇಂದ್ರ ನಾಯಕ್ ಪಾಲಮೆ, ಅನಂತರಾಮ ವಾಗ್ಲೆ, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ, ನಿವೃತ್ತ ಯೋಧ ರಾಜೇಂದ್ರ ಪಾಟ್ಕರ್, ವೀರೇಂದ್ರ ಪಾಟ್ಕರ್, ಕಾರು ಚಾಲಕ ಮಾಲೀಕರ ಸಂಘ ಅಧ್ಯಕ್ಷ ಉಮೇಶ್ ರಾವ್, ಆಶಿಷ್ ಪಾಟ್ಕರ್, ವಿಶ್ವನಾಥ್ ನಾಯಕ್ ಪಾಂಬೂರು ಸೇವಾ ವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್ ಸ್ವಾಗತಿಸಿದರು. ಸೇವಾ ವೃಂದ ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ವಂದಿಸಿದರು.