ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಪ್ರೊ.ಕೃಷ್ಣೇಗೌಡರ ನಗೆಹಬ್ಬ ಕಾರ್ಯಕ್ರಮ ಗಮನ ಸೆಳೆಯಿತು. 
ಜಿಲ್ಲೆ

ಶಾಸ್ತ್ರೋಕ್ತವಾಗಿ ನೆರವೇರಿದ ಮಂಡಲ ಪೂಜಾ ಮಹೋತ್ಸವ

ಅರಕಲಗೂಡು: ತಾಲೂಕಿನ ಶಣವಿನಕುಪ್ಪೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮಂಡಲ ಪೂಜಾ ಮಹೋತ್ಸವ ಮಂಗಳವಾರ ಶಾಸ್ತ್ರೋಕ್ತವಾಗಿ ನೆರವೇರಿತು.

ಪುರಾತನ ಕಾಲದ ದೇವಸ್ಥಾನ ಶಿಥಿಲಗೊಂಡಿದ್ದರಿಂದ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಕಾಯಕಲ್ಪ ನೀಡಲಾಗಿತ್ತು. ಲೋಕಾರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಂಡಲ ಪೂಜೆ ನೆರವೇರಿತು. ಇದರ ಪ್ರಯುಕ್ತ ದೇವರಿಗೆ ರುದ್ರಾಭಿಷೇಕ, ಹೋಮ ಸೇರಿದಂತೆ ವಿವಿಧ ಪೂಜಾ ವಿಧಾನಗಳು ವಿಧಿವತ್ತಾಗಿ ನಡೆದವು. ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಮಾಡಲಾಯಿತು. ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಗಳು ಸಾಂಗವಾಗಿ ನಡೆಯಿತು.

ಪ್ರೊ.ಎಂ. ಕೃಷ್ಣೇಗೌಡ ಅವರಿಂದ ನಗೆಹಬ್ಬ, ಮಿಮಿಕ್ರಿ ಗೋಪಿ ಮತ್ತು ಗಿರೀಶ್ ಆರಾಧ್ಯ ಅವರ ಮ್ಯಾಜಿಕ್ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಶ್ರೀರಾಮನ ಭಂಟ ಹನುಮಂತ ನೆಲೆಸಿದ್ದ ಈ ಗ್ರಾಮದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನಡೆದಿದ್ದು, ಗ್ರಾಮಸ್ಥರು ಹಾಗೂ ದಾನಿಗಳಿಂದ ಸಹಕಾರ ದೊರೆತಿದೆ. ಹೀಗಾಗಿ ದೇವಸ್ಥಾನವನ್ನು ಹೊಸದಾಗಿ ಏಳೆಂಟು ತಿಂಗಳಲ್ಲಿ ನಿರ್ಮಿಸಲು ಸಾಧ್ಯವಾಯಿತು ಎಂದು ಗ್ರಾಮದ ಶ್ರೀ ವೀರಭದ್ರೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಂತೋಷ್ ಶಣವಿನಕುಪ್ಪ ತಿಳಿಸಿದರು.