ಬೈಲಕುಪ್ಪೆ: ಸಮೀಪದ ಮುತ್ತಿನ ಮುಳಸೋಗೆ ಗ್ರಾಮದಲ್ಲಿ ಅಯ್ಯಪ್ಪಸ್ವಾಮಿ ಭಕ್ತರು ಮಂಡಲ ಪೂಜೆ ನೆರವೇರಿಸಿ ಗುರುಸ್ವಾಮಿಗಳಿಂದ ಇರುಮುಡಿ ಕಟ್ಟಿಸಿಕೊಂಡು ಶನಿವಾರ ಶಬರಿಮಲೆಯತ್ತ ತೆರಳಿದರು.
ಪಿರಿಯಾಪಟ್ಟಣ ತಾಲೂಕಿನ ಅವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಿನ ಮುಳಸೋಗೆ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ಭಕ್ತರು 40 ದಿನ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಬಳಿಕ ವಿವಿಧ ಹೋಮಗಳನ್ನು ನೆರವೇರಿಸಿ ನೈವೇದ್ಯ ಮಾಡಿ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ಮಾಡಿದರು.
ಗುರುಸ್ವಾಮಿಗಳಾದ ಕರಿನಾಯಕ, ಹನುಮಂತ ನಾಯಕ, ಅಶೋಕ್, ಸಂತೋಷ್, ರವಿನಾಯಕ, ಗ್ರಾಮದ ಮುಖಂಡರಾದ ಶಶಿಕಲಾ, ವೆಂಕಟೇಶ್, ಎಂ.ಟಿ.ನಾಗಪ್ಪ, ವೀರದೇವನಾಯಕ, ದೇವರಾಜ ನಾಯಕ, ಪುಟ್ಟಸ್ವಾಮಿ ಇತರರಿದ್ದರು.