ಸೋಮವಾರಪೇಟೆ ಕಕ್ಕೆಹೊಳೆ ಬಳಿಯ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜಾ ಮಹೋತ್ಸವ ಅಂಗವಾಗಿ ಪಡಿಪೂಜೆ ನಡೆಯಿತು. 
ಜಿಲ್ಲೆ

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜೆ

ಸೋಮವಾರಪೇಟೆ: ಇಲ್ಲಿನ ಕಕ್ಕೆಹೊಳೆ ಬಳಿಯ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಮಂಡಲ ಪೂಜಾ ಮಹೋತ್ಸವ ಶೃದ್ಧಾಭಕ್ತಿಯಿಂದ ಜರುಗಿತು.

ಬೆಳಗ್ಗೆ 5 ಗಂಟೆಗೆ ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ ತಾಂತ್ರಿಕತ್ವದಲ್ಲಿ ಶ್ರೀ ಮಹಾಗಣಪತಿ ಹೋಮದೊಂದಿಗೆ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡವು. ನಿರ್ಮಲ್ಯ ದರ್ಶನದ ಬಳಿಕ ಉಷಾಪೂಜೆ ನಡೆದು, ಬೆಳಗ್ಗೆ 9ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪದ ಅಭಿಷೇಕ ನೆರವೇರಿಸಲಾಯಿತು.

ಮಧ್ಯಾಹ್ನ ಶ್ರೀ ಅಯ್ಯಪ್ಪ ಸ್ವಾಮಿಯನ್ನು ವಿಶೇಷವಾಗಿ ಆಭರಣಗಳೊಂದಿಗೆ ಸಿಂಗರಿಸಿ ಪೂಜೆಯನ್ನು ನೆರವೇರಿಲಾಯಿತು. ನಂತರ 6.30ಕ್ಕೆ ಭಕ್ತಾದಿಗಳು ಹಾಗೂ ಅಯ್ಯಪ್ಪ ವ್ರತಧಾರಿಗಳ ಭಜನೆಯೊಂದಿಗೆ ಪಡಿಪೂಜೆಯನ್ನು ನಡೆಸಲಾಯಿತು.

ಮಹಾಮಂಗಳಾರತಿ ನಂತರ ಹರಿವಾರಾಸನದೊಂದಿಗೆ ಮಂಡಲ ಪೂಜೋತ್ಸವ ಸಂಪನ್ನಗೊಂಡಿತು. ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪೂಜಾ ಕಾರ್ಯದಲ್ಲಿ ಅರ್ಚಕರಾದ ಜಗದೀಶ್ ಉಡುಪ, ಚಂದ್ರಶೇಖರ್ ಭಟ್, ಶ್ರೀರಂಗ ಭಟ್, ಚಂದ್ರಹಾಸ ಭಟ್ ಮತ್ತಿರರು ಸಹಕರಿಸಿದರು. ಕ್ಷೇತ್ರದ ಅಧ್ಯಕ್ಷ ವಿನೋದ್‌ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಇದ್ದರು.