ಜಿಲ್ಲೆ

ನ.23, 24ರಂದು ಮಂಚಮ್ಮದೇವಿ ಪುನರ್ ಕರಗ ಪ್ರತಿಷ್ಠಾಪನೆ: ಎರಡು ದಿನ ಎಚ್.ಮಲ್ಲಿಗೆರೆಯಲ್ಲಿ ಧಾರ್ಮಿಕ ಕೈಂಕರ್ಯ

ಮಂಡ್ಯ: ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ ನ.23 ಮತ್ತು 24ರಂದು ಚಿಕ್ಕಮನೆ ಪಾಲಿನ ಜೀರ್ಣೋದ್ಧಾರಿತ ಮನೆದೇವರು ಮಂಚಮ್ಮ ದೇವಿಯ ನೂತನ ದೇವಾಲಯ ಉದ್ಘಾಟನೆ ಮತ್ತು ಮಂಚಮ್ಮದೇವಿ ಪುನರ್ ಕರಗ ಪ್ರತಿಷ್ಠಾಪನೆ ಹಾಗೂ ರಜತ ಬಿಂಬಧಾರಣೆ, ಕುಂಭಾಷೇಕ ಮಹೋತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಮಾದಪ್ಪ ತಿಳಿಸಿದರು.

ಮಂಚಮ್ಮ ದೇವಿ ಸೇವಾ ಟ್ರಸ್ಟ್ ವತಿಯಿಂದ ಎರಡು ದಿನ ಧಾರ್ಮಿಕ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ. 23ರಂದು ಮಧ್ಯಾಹ್ನ 3 ಗಂಟೆಗೆ ಗಣಪತಿಪೂಜೆ, ಶೈವ ಪುಣ್ಯಾಹ ವಾಚನ, ನಾಂದಿ ಪಂಚಗವ್ಯಹೀರಾ ಮಕ್ಕಳ ಕುಣಿತ, ಅಂಕನಾಥೇಶ್ವರ ಗದ್ದಿಗೆ, ಏಳೂರಮ್ಮನ ಪೂಜಾ ಕುಣಿತ, ಗ್ರಾಮ ಪ್ರದಕ್ಷಿಣೆ, ಪ್ರವೇಶಬಲಿ, ದೇವಾಲಯ ಮಹಾದ್ವಾರ ಪೂಜೆ, ಆಲಯ ಪ್ರವೇಶ, ಶಿಖರ ಕಳಸಗಳಿಗೆ ಪಂಚಗವ್ಯ ಸಂಪ್ರೋಕ್ಷಣೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳಿರಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂತೆಯೇ ರಾತ್ರಿ 9 ಗಂಟೆಗೆ ಅಂಕನಾಥೇಶ್ವರಸ್ವಾಮಿ, ದೊಡ್ಡಯ್ಯ ಬೀರೇಶ್ವರಸ್ವಾಮಿ, ಎಚ್.ಮಲ್ಲಿಗೆರೆ ಮಂತ್ರಿ ಹುಚ್ಚುರಾಯ ಬೀರೇಶ್ವರಸ್ವಾಮಿ, ವದೇಸಮುದ್ರ ಚಿಕ್ಕಯ್ಯ ಬೀರೇಶ್ವರಸ್ವಾಮಿ, ಏಳೂರಮ್ಮ ದೇವಿಯ ಉತ್ಸವ ನಡೆಯಲಿದೆ. 24ರಂದು ಮುಂಜಾನೆ 4.30ಕ್ಕೆ ಮಂಚಮ್ಮ ದೇವಿ ಕರಗ ಪ್ರತಿಷ್ಠಾಪನೆ, ರಜತ ಬಿಂಬಧಾರಣೆ, ಪ್ರಾಣಪ್ರತಿಷ್ಠೆ, ಗೋಪುರ ಕಳಸ, ಫಲಪಂಚಾಮೃತ ಅಭಿಷೇಕ, ಕುಂಭಾಷೇಕ, 6.30ಕ್ಕೆ ಗೋಪುರ ಕಳಸ ಪ್ರತಿಷ್ಠಾಪನೆ, ಅಷ್ಟಮಹಾಲಕ್ಷ್ಮೀ ಹೋಮ, ಗ್ರಾಮದೇವತೆ ಹೋಮ, 9.30ಕ್ಕೆ ಮಹಾಪೂರ್ಣಾಹುತಿ, ಕಷ್ಮಾಂಡ ಛೇದನ, ಕದಳಿ ವೃಕ್ಷ ಛೇದನ, 10 ಗಂಟೆಗೆ ಅಷ್ಟೋತ್ತರ ಕುಂಕುಮಾರ್ಚನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿರಲಿದೆ. ಅಂದು ಬೆಳಗ್ಗೆ 11.30ಕ್ಕೆ ಅನ್ನಸಂತರ್ಪಣೆ ಹಾಗೂ ರಾತ್ರಿ 10 ಗಂಟೆಗೆ ಶಿವಾರ ಉಮೇಶ್ ಮತ್ತು ತಂಡದವರಿಂದ ಭಕ್ತಿಗೀತೆಗಳ ಗಾಯನ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಟ್ರಸ್ಟ್‌ನ ಅರುಣ್ ರಾಮಾರಾಧ್ಯ, ಎಂ.ಬಿ.ಚನ್ನಪ್ಪ, ಎಂ.ಎನ್.ವೀರೇಶ್, ಜಯರಾಂ ಇದ್ದರು.