ಮಾನ್ವಿ ಪಟ್ಟಣದ ಪಂಪಾ ವಿರೂಪಾಕ್ಷೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಶಾಲೆಯ ಆಡಳಿತಾಧಿಕಾರಿ ಸಂಗಯ್ಯಸ್ವಾಮಿ ಉದ್ಘಾಟಿಸಿದರು. ಪ್ರಮುಖರಾದ ಮಂಜುನಾಥ ಕಮತರ್, ರೂಪಾ, ಅನ್ನಪೂರ್ಣ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಜ್ಞಾನ ಪಡೆದು ಸಾಧನೆ ಮಾಡಲಿ

ಮಾನ್ವಿ: ಪಟ್ಟಣದ ಪಂಪಾ ವಿರೂಪಾಕ್ಷೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಸಿಹಿ ತಿನಿಸಿ ಸ್ವಾಗತ ಕೋರಲಾಯಿತು.

ಕಲ್ಮಠ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂಗಯ್ಯಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಲ್ಲಿ ಗುರುಗಳಿಂದ ಜ್ಞಾನ ಪಡೆದುಕೊಂಡು ಜೀವನದಲ್ಲಿ ಉನ್ನತ ವ್ಯಕ್ತಿಗಳಾಗಿ ಸಮಾಜ ಹಾಗೂ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದ ಅವರು, ಪಾಲಕರು ಕೂಡ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ಎಂದರು.

ಕಲ್ಮಠ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಂಜುನಾಥ ಕಮತರ್, ಕಲ್ಮಠ ಫ್ರೌಡಶಾಲೆ ಮುಖ್ಯಶಿಕ್ಷಕ ಪ್ರಭಯ್ಯಸ್ವಾಮಿ, ಎಸ್.ಎಸ್.ಪಾಟೀಲ್, ಸಿದ್ದನಗೌಡ ಪಾಟೀಲ್, ಶಿಕ್ಷಕರಾದ ಭ್ರಮರಾಂಬ, ಎಂ.ಎಂ.ಹಿರೇಮಠ, ಕೇಮನಾಯ್ಕ, ಶಾಂತಯ್ಯಸ್ವಾಮಿ, ರಾಘವೇಂದ್ರ, ಜಯಶ್ರೀ, ಮಹಾಂತಮ್ಮ, ರೂಪಾ, ಅನ್ನಪೂರ್ಣ, ಪವಿತ್ರಾ, ಪ್ರಭಾವತಿ, ಇತರರಿದ್ದರು.