ಜಿಲ್ಲೆ

ಕಚೇರಿ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ: ಅಂಗವಿಕಲರಿಂದ ಎಡಿಸಿಗೆ ಮನವಿ

reportermys

ಮಂಡ್ಯ: ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಕಚೇರಿಯನ್ನು ಸೆಂಟ್ರಲ್ ಪೊಲೀಸ್ ಠಾಣೆಯ ಕಚೇರಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಅಂಗವಿಕಲರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಅಂಗವಿಕಲರು, ಜಿಲ್ಲಾ ಇಲಾಖೆ ಕಚೇರಿ ತೀರಾ ಕಿರಿದಾಗಿದೆ. ಚಿಕ್ಕ ಸ್ಥಳಾವಕಾಶವನ್ನು ಹೊಂದಿದ್ದು, ಇದರಿಂದ ವಿವಿಧೆಡೆಯಿಂದ ಕಚೇರಿಗೆ ಆಗಮಿಸುವವರಿಗೆ ಒಳಗೆ ಹೋಗಲು ಕಷ್ಟವಾಗುತ್ತಿದೆ. ಕಚೇರಿಯಲ್ಲಿ ಶೌಚಗೃಹ ವ್ಯವಸ್ಥೆಯೂ ಇಲ್ಲ. ಆದ್ದರಿಂದ ಹಾಲಿ ಸೆಂಟ್ರಲ್ ಪೊಲೀಸ್ ಠಾಣೆ ಬೇರೆ ಕಡೆಗೆ ಸ್ಥಳಾಂತರವಾಗುತ್ತಿದ್ದು, ಖಾಲಿ ಕಟ್ಟಡದಲ್ಲಿ ಜಿಲ್ಲಾ ಕಚೇರಿಯನ್ನಾಗಿ ಸ್ಥಳಾಂತರಿಸಿಕೊಂಡು ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

ಶಿವಕುಮಾರ್, ಬೋರೇಗೌಡ, ಮಲ್ಲೇಶ, ಸ್ಫೂರ್ತಿ, ಯೋಗಾನಂದ, ನಾಗೇಶ, ಎಂ.ಲಕ್ಷ್ಮೀ, ದೀಪಕ್, ಕೆ.ಎನ್.ಭವ್ಯಾ, ಎಂ. ಅಶೋಕ, ಎಂ.ಡಿ.ಶಶಿಧರ್, ರೂಪಾದೇವಿ, ಎಸ್.ವಿ.ಗಿರಿಜಾ, ಎಸ್.ಎಸ್.ಪೂರ್ಣಿಮಾ ಇತರರಿದ್ದರು.