ಜಿಲ್ಲೆ

ವೈದ್ಯರಿಗೆ ವಾರಕ್ಕೊಂದು ರಜೆ ನೀಡಿ ; ಜಿಲ್ಲಾಧಿಕಾರಿ ಮೂಲಕ ಆರೋಗ್ಯ ಸಚಿವರಿಗೆ ಮನವಿ ರವಾನೆ

Tumakuru

ತುಮಕೂರು : ವಾರದಲ್ಲಿ 2 ದಿನ ವ್ಯಾಕ್ಸಿನೇಷನ್ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ವಾರದಲ್ಲಿ ಕನಿಷ್ಠ ಒಂದು ದಿನ ರಜೆ ನೀಡಬೇಕು ಎಂದು ಆಗ್ರಹಿಸಿ ಸರ್ಕಾರಿ ವೈದ್ಯಾಧಿಕಾರಿಗಳ ಸಂದ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಆರೋಗ್ಯ ಸಚಿವರಿಗೆ ಮನವಿ ರವಾನಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರನ್ನು ಸರ್ಕಾರಿ ವೈದ್ಯಾಧಿಕಾರಿಗಳ ಸಂದ ಜಿಲ್ಲಾಧ್ಯಕ್ಷ ಡಾ.ರಾಜಶೇಖರ ನೇತೃತ್ವದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಮತ್ತಿತರರು ಮನವಿ ಸಲ್ಲಿಸಿದರು.

ವೈದ್ಯರು 2 ವರ್ಷಗಳಿಂದ ಕರೊನಾ ನಿಯಂತ್ರಣ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಶ್ರಮವಹಿಸಿ ಕೆಲಸ ವಾಡುತ್ತಿದ್ದಾರೆ. 2 ವರ್ಷಗಳಿಂದ ನಿರಂತರವಾಗಿ ಯಾವುದೇ ಅಧಿಕೃತ ರಜಾ ದಿನಗಳು ಮತ್ತು ಹಬ್ಬ ಹರಿದಿನಗಳಲ್ಲೂ ರಜೆ ಪಡೆಯದೆ ಕರೊನಾ ಲಸಿಕೆ ನಡೆಸಲಾಗುತ್ತಿದ್ದು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಅಳಲು ತೋಡಿಕೊಂಡರು.

ಕುಟುಂಬದ ಜತೆ ಕಾಲ ಕಳೆಯಲು ಸಮಯಾವಕಾಶ ಇಲ್ಲದೆ ವೈದ್ಯರು ದೈಹಿಕವಾಗಿ ಮತ್ತು ವಾನಸಿಕವಾಗಿ ಬಳಲಿದ್ದು, ತಮ್ಮ ಕೌಟುಂಬಿಕ ಜೀವನಕ್ಕೆ ಆದ್ಯತೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಡಾ.ರಾಜಶೇಖರ್ ಹೇಳಿದರು.

ಕಳೆದೆರಡು ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣವಾಗಿ ತನು, ಮನ ಆರೋಗ್ಯ ಇತರ ವೈಯಕ್ತಿಕ ವಿಷಯಗಳನ್ನು ಬದಿಗಿಟ್ಟು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಒದಗಿಸುವಲ್ಲಿ ಕಾರ್ಯನಿರತರಾಗಿದ್ದೇವೆ. ಆದರೆ, ಇತ್ತೀಚೆಗೆ ಸರ್ಕಾರದಿಂದ ಅಧಿಕೃತವಾಗಿ ರಜೆ ನೀಡದಿರುವುದರಿಂದ ಕುಟುಂಬದ ಜತೆ ಕಾಲ ಕಳೆಯಲು ಸಮಯ ಸಿಗುತ್ತಿಲ್ಲ, ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ರಜೆ ನೀಡಲು ಕ್ರಮಕೈಗೊಳ್ಳಬೇಕು ಎಂದರು.

ಖಾಲಿ ಹುದ್ದೆಗಳ ಭರ್ತಿ ಮಾಡಿ : ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ವಾರದಲ್ಲಿ 2 ದಿನ ನಿಗದಿಗೊಳಿಸುವಂತೆ ಮನವಿ ವಾಡಿದ ಅವರು, ದಿನನಿತ್ಯ ಈ ಕಾರ್ಯಕ್ರಮ ವಾಡಿದರೆ ಬೇರೆ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಉಳಿದ ಕಾರ್ಯಕ್ರಮ ನಡೆಸಲು ಅನುವು ವಾಡಿಕೊಡಬೇಕು. ಜತೆಗೆ ಪ್ರೋತ್ಸಾಹ ಧನ ಮತ್ತು ವಾಹನಗಳ ವ್ಯವಸ್ಥೆ ಸಹ ವಾಡಿಕೊಡಬೇಕು ಎಂದು ಡಾ.ರಾಜಶೇಖರ್ ಹೇಳಿದರು. ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲ ಹಂತದಲ್ಲೂ ಸಾಕಷ್ಟು ಖಾಲಿ ಹುದ್ದೆಗಳು ಖಾಲಿ ಇರುವುದು ಸಹ ಕಾರ್ಯ ಒತ್ತಡ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಹಾಗಾಗಿ ಕೂಡಲೇ ಖಾಲಿ ಹುದ್ದೆಗಳ ಭರ್ತಿಗೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ವಾಡಿದರು.

ವೈದ್ಯಾಧಿಕಾರಿಗಳಾದ ಡಾ.ಮೋಹನ್, ಡಾ.ಕೇಶವರಾಜ್, ಫಾರ್ಮಸಿ ಅಧಿಕಾರಿ ಸಂದ ಜಿಲ್ಲಾಧ್ಯಕ್ಷ ಎಂ.ಗಂಗಾಧರ್, ರೇಣುಕಾಂಬ, ಪದ್ಮಣ್ಣ, ರಂಗನಾಥ್, ವಿನೋದ್, ಜಯಕುವಾರ್, ಸಿ.ಎಸ್.ರವ್ಯಾ ಮತ್ತಿತರರು ಇದ್ದರು.