ಜಿಲ್ಲೆ

ಇಂದಿನಿಂದ ಮನಗೂಳಿ ಬಸವೇಶ್ವರ ಜಾತ್ರೆ

ಗಿರೀಶ ಸಗರ

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಆ. 15 ರಿಂದ ಆ. 18 ರವರೆಗೆ ಸಂಭ್ರಮದಿಂದ ನಡೆಯಲಿದೆ. ಸ್ಥಳಿಯ ಪೂಜ್ಯದ್ವಯರ ಸಾನ್ನಿಧ್ಯ ಹಾಗೂ ದೇವಸ್ಥಾನ ಸಮಿತಿ ಅಧ್ಯ ಸೋಮನಗೌಡ (ಅಪ್ಪುಗೌಡ) ಪಾಟೀಲರ ನೇತೃತ್ವದಲ್ಲಿ ಜಾತ್ರೆ ನಡೆಯಲಿದೆ.

ಆ. 15 ರಂದು ಬೆಳಗ್ಗೆ ಬಸವೇಶ್ವರ ಹಾಗೂ ಸಂಗಮೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಹಾಗೂ ಮಧ್ಯಾಹ್ನ 1ಕ್ಕೆ ವಾದ್ಯವೈಭವಗಳೊಂದಿಗೆ ಬಸವಣ್ಣನವರ ಭಾವಚಿತ್ರ ಮೆರವಣಿಗೆ ಮತ್ತು ಕಲಶದ ಪೂಜೆ ನಡೆಯಲಿದೆ.

ಸಂಜೆ 6ಕ್ಕೆ ಬಸವೇಶ್ವರ ರಥೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ನಂದಿಕೋಲ ಮೆರವಣಿಗೆ, ನಂತರ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ಕ್ಕೆ "ಮಗ ಹೋದರು ಮಾಂಗಲ್ಯ ಬೇಕು' ನಾಟಕ ಪ್ರದರ್ಶನಗೊಳ್ಳಲಿದೆ.ಆ. 16 ರಂದು ಬೆಳಗ್ಗೆ 11ಕ್ಕೆ ಭಾರ ಎತ್ತುವ ಸ್ಪರ್ಧೆ, ಮಧ್ಯಾಹ್ನ 3ಕ್ಕೆ ಜಂಗಿ ನಿಕಾಲಿ ಕುಸ್ತಿಗಳು, ರಾತ್ರಿ 9ಕ್ಕೆ ಸೋಮೇಶ್ವರ ಭಜನಾ ಮಂಟಪದಲ್ಲಿ ಜಾನಪದ ನೃತ್ಯ ಹಾಗೂ ಹಾಡುಗಳು ನಡೆಯಲಿವೆ.

ಆ. 17 ರಂದು ಸಂಜೆ 6ಕ್ಕೆ ರಸಮಂಜರಿ ಕಾರ್ಯಕ್ರಮ ಮತ್ತು ಆ. 18 ರಂದು ಸಂಜೆ 5ಕ್ಕೆ ರಥೋತ್ಸವ, ಕಲಶ ವಿಸರ್ಜನೆ ಹಾಗೂ ಬಸವೇಶ್ವರ ಪಲ್ಲಕ್ಕಿಯು ದೇವಸ್ಥಾನದಿಂದ ಪುರಪ್ರವೇಶ ಕಾರ್ಯಕ್ರಮ ನಡೆಯಲಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ.