ಚಿಂತಾಮಣಿ: ಮಗಳ ಆಸೆ ಪೂರೈಸಲು ಸಂತೇಕಲ್ಲಹಳ್ಳಿ ನಿವಾಸಿ ಬೆಂಗಳೂರಿನ ಹನುಮಂತನಗರದಲ್ಲಿ ಕ್ಯಾಬ್ ಚಾಲಕನಾಗಿರುವ ಸಂಪತ್ಕುಮಾರ್ (43) ಸೋಮವಾರ ತರ್ಕಶಾಸ್ತ್ರ ಪರೀಕ್ಷೆ ಬರೆದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1997ರಲ್ಲಿ ದ್ವಿತೀಯ ಪಿಯುಸಿ ಫೇಲ್ ಆದ ನಂತರ ಜೀವನೋಪಾಯಕ್ಕೆ ಚಾಲಕರಾಗಿದ್ದರು. 7ನೇ ತರಗತಿಯ ಮಗಳು ರಕ್ಷಿತಾಗೆ ಪಾಠ ಹೇಳಿ ಕೊಡುವಾಗ ತನ್ನ ಶಿಕ್ಷಣದ ಬಗ್ಗೆ ಪ್ರಶ್ನಿಸಿದ್ದಳು. ದ್ವಿತೀಯ ಪಿಯುಸಿ ಫೇಲಾಗಿರುವ ಬಗ್ಗೆ ಹೇಳಿದಾಗ, ಫೇಲಾ ಎಂದಿದ್ದಳು. ಆಕೆಯ ತೃಪ್ತಿಗಾಗಿ 23 ವರ್ಷಗಳ ನಂತರ ಪರೀಕ್ಷೆ ಬರೆಯುವ ನಿರ್ಧಾರ ಕೈಗೊಂಡೆ. ಚೆನ್ನಾಗಿ ಓದಿಯೇ ಪರೀಕ್ಷೆ ಬರೆದಿದ್ದು ಉತ್ತೀರ್ಣನಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.