ಬೆಂಗಳೂರು: ವಿಲಕ್ಷಣಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ಮಹಿಳೆಯರ ಒಳಉಡುಪುಗಳನ್ನು ಕದ್ದು ಹಸ್ತಮೈಥುನ ಮಾಡಿಕೊಳ್ಳುತ್ತಿರುವ ಘಟನೆ ಬೆಂಗಳೂರಿನ ಲಗ್ಗೆರೆ ಬಳಿ ಇರುವ ವಿಧಾನಸೌಧ ಲೇಔಟ್ನಲ್ಲಿ ನಡೆದಿದೆ.
ಕಾಮುಕನ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಒಬ್ಬರು ಆರೋಪಿಯೂ ಮಹಿಳೆಯರು ಒಬ್ಬಂಟಿಯಾಗಿರುವುದನ್ನು ಗಮನಿಸಿ ಬಾಡಿಗೆಗೆ ಮನೆಯನ್ನು ಹುಡುಕುತ್ತಿರುವುದಾಗಿ ಹೇಳಿ ಪ್ರವೇಶಿಸುತ್ತಿದ್ದ. ಬಳಿಕ ವಾಶ್ರೂಂ ಬಳಸುವುದಾಗಿ ಹೇಳಿ ಅವರ ಮನೆಯ ಬಾತರೂಂಗಳಲ್ಲಿ ಕ್ಯಾಮರಾಗಳನ್ನು ಇಟ್ಟು ಮಹಿಳೆಯರು ಸ್ನಾನ ಮಾಡುವ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದ.
ಇದನ್ನೂ ಓದಿ: ಹೆಂಡತಿಯನ್ನು ಮನೆಗೆ ಕಳಿಸದ ಅತ್ತೆ; ಪ್ರಾಣಬಿಟ್ಟ ಅಳಿಯ
ಬಳಿಕ ಮನೆಯನ್ನು ನೋಡುವ ನೆಪದಲ್ಲಿ ಟೆರೇಸ್ ಹಾಗೂ ಬಟ್ಟೆ ಒಣ ಹಾಕುವ ಜಾಗಕ್ಕೆ ಹೋಗಿ ಅಲ್ಲಿ ಮಹಿಳೆಯರ ಒಳಉಡುಪುಗಳನ್ನು ಕದ್ದು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಇತ್ತೀಚಿಗೆ ಇದೇ ರೀತಿ ಆರೋಪಿಯೂ ಮನೆ ನೋಡುವ ನೆಪದಲ್ಲಿ ಒಗೆಯಲು ಹಾಕಿದ್ದ ಬ್ಲೌಸ್ ತೆಗೆದುಕೊಂಡು ಹಸ್ತಮೈಥುನ ಮಾಡುತ್ತಿದ್ದಾಗ ನೆರೆ ಮನೆಯವರು ಅಳವಿಡಿಸಿದ್ದ ಸಿಸಿಟಿವಿಯಲ್ಲಿ ದೈಶ್ಯ ಸೆರೆಯಾಗಿ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು ಆತನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.