Boy Hiding Behind Brick Wall and Peeping Cartoon Vector Illustration on White Background. 
ಜಿಲ್ಲೆ

ಯುವತಿ ಸ್ನಾನ ಮಾಡುತ್ತಿದ್ದ ದೃಶ್ಯ ಚಿತ್ರೀಕರಣ ಉಳ್ಳಾಲ ಠಾಣೆಯಲ್ಲಿ ದೂರು

ಉಳ್ಳಾಲ: ಮನೆಯ ಶೌಚಗೃಹದಲ್ಲಿ ಯುವತಿ ಸ್ನಾನ ಮಾಡುತ್ತಿದ್ದುದನ್ನು ವಿಡಿಯೋ ಮಾಡಿದ ಬಗ್ಗೆ ಪ್ರಕರಣ ಮಾಡೂರಿನಲ್ಲಿ ನಡೆದಿದೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಡೂರಿನ ಮನೆಯೊಂದರ ಶೌಚಗೃಹದಲ್ಲಿ ಶುಕ್ರವಾರ ಸಂಜೆ ಯುವತಿ ಸ್ನಾನ ಮಾಡುತ್ತಿದ್ದಾಗ ಕಾಮುಕನೋರ್ವ ಕಿಟಕಿಯ ಸಂದುಗಳಲ್ಲಿ ಮೊಬೈಲ್ ಇಟ್ಟು ಸ್ನಾನದ ದೃಶ್ಯಾವಳಿಗಳನ್ನು ಸೆರೆ ಹಿಡಿದಿದ್ದಾನೆ.

ಇದನ್ನು ಗಮನಿಸಿದ ಯುವತಿ ಜೋರಾಗಿ ಕಿರುಚಿಕೊಂಡಾಗ ಕಾಮುಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಯುವತಿ ತಾಯಿಯಲ್ಲಿ ವಿಚಾರ ಹೇಳಿದ್ದಾಳೆ. ಕಿಟಕಿ ಹಿಂಭಾಗಕ್ಕೆ ಹೋದಾಗ ಆರೋಪಿ ಪರಾರಿಯಾಗಿದ್ದು, ಆತ ಬಳಸಿದ್ದ ಬೆಂಚೊಂದು ಪತ್ತೆಯಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಶೋಧ ಆರಂಭಗೊಂಡಿದೆ.