ಕಡಬ: ಪರಿಸರ ಮತ್ತು ಮನುಷ್ಯನ ಜೀವನಕ್ಕೆ ಅವಿನಾಭಾವ ಸಂಬಂಧವಿದೆ. ಪರಿಸರ ಹೊರತುಪಡಿಸಿ ಮನುಷ್ಯನ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದುದರಿಂದ ಪರಿಸರದ ಕುರಿತು ಮಾಹಿತಿ ಪಡೆದುಕೊಳ್ಳುವುದು ಅಗತ್ಯ ಎಂದು ಕಡಬದ ಸರಸ್ವತಿ ಸಮೂಹ ಸಂಸ್ಥೆಗಳ ಸಂಚಾಲಕ ಮಂಕುಡೆ ವೆಂಕಟ್ರಮಣ ರಾವ್ ಹೇಳಿದರು.
ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ನ ಸಹಯೋಗದಲ್ಲಿ ಜೇಸಿ ಸಪ್ತಾಹ&2024 ಕಾರ್ಯಕ್ರಮದಡಿ ಕಡಬದ ಸರಸ್ವತಿ ವಿದ್ಯಾಲಯ ಪ್ರೌಢಶಾಲೆ ಪರಿಸರ ಸಂದ ಸಹಕಾರದೊಂದಿಗೆ ಕಡಬದ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಭಟ್ ಅವರ ವೃಕ್ಷ ವೈವಿಧ್ಯ ವನದಲ್ಲಿ ಆಯೋಜಿಸಲಾಗಿದ್ದ ಪರಿಸರ ಅಧ್ಯಯನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಭಟ್, ಪಂಜ ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್ ರೈ ಹಾಗೂ ಯಶೋಧರ ಕೆ. ಸಂಪನ್ಮೂಲ ವ್ಯಕ್ತಿಗಳಾಗಿ ಔಷಧೀಯ ಗಿಡಗಳು ಹಾಗೂ ವೃಕ್ಷಗಳ ಕುರಿತು ಮಾಹಿತಿ ನೀಡಿದರು. ಜೇಸಿಐ ರಾಷ್ಟ್ರೀಯ ಅಧಿಕಾರಿ ಕಾಶೀನಾಥ್ ಗೋಗಟೆ, ಸಪ್ತಾಹ ನಿರ್ದೇಶಕ ರಾಜೇಶ್ ಎ.ಕೆ., ಸರಸ್ವತಿ ವಿದ್ಯಾಲಯ ಪ್ರೌಢಶಾಲೆ ಪರಿಸರ ಸಂ ಮೇಲ್ವಿಚಾರಕಿ ಸೌಮ್ಯಾ ಕೆ.ಎ. ಉಪಸ್ಥಿತರಿದ್ದರು.
ಜೇಸಿಐ ಕಡಬ ಕದಂಬದ ಅಧ್ಯಕ್ಷ ಜಾಫಿರ್ ಮಹಮ್ಮದ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಜೇಮ್ಸ್ ಕ್ರಿಶಾಲ್ ಡಿ' ಸೋಜ ವಂದಿಸಿದರು.