ಬಾಗಲಕೋಟೆ: ಗ್ರಾಮದಲ್ಲಿ ಕುರಿಗಳನ್ನು ಹೊತ್ತೊಯ್ಯುತ್ತಿದ್ದ ಕಳ್ಳರ ಗ್ಯಾಂಗ್ ಪತ್ತೆಹಚ್ಚಲು ಸ್ವತಃ ತಾನೇ ಕಳ್ಳರ ಬೆನ್ನತ್ತಿದ್ದ ಯುವಕನೊಬ್ಬ ಬರ್ಬರವಾಗಿ ಹತ್ಯೆಯಾದ ಘಟನೆ (Murder Case) ಬಾದಾಮಿ ತಾಲೂಕಿನ ಹಳಗೇರಿ ಟೋಲ್ ನಾಕಾ ಬಳಿ ಸಂಭವಿಸಿದೆ.
ಇದನ್ನೂ ಓದಿ: ಹೆಬ್ಬಾವು ಹಿಡಿದು ಸ್ಕಿಪ್ಪಿಂಗ್ ಆಡಿದ ಮಕ್ಕಳು! ಭಾರೀ ಆಕ್ರೋಶಕ್ಕೆ ಕಾರಣವಾಯ್ತು ವೈರಲ್ ವಿಡಿಯೋ… Python
ಮೃತ ಯುವಕನನ್ನು ಶರಣಪ್ಪ ಜಮ್ಮನಕಟ್ಟಿ (23) ಎಂದು ಗುರುತಿಸಲಾಗಿದೆ. ಭೀಕರವಾಗಿ ಕೊಲೆಯಾದ ಶರಣಪ್ಪ ಉಗಲವಾಟ ಗ್ರಾಮದವನು ಎನ್ನಲಾಗಿದೆ. ಕಲ್ಲು, ಕೊಡಲಿಯಿಂದ ಕೊಚ್ಚಿ ಶರಣಪ್ಪನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಯಾಕುಬ್ ಅಗಸಿಮನಿ, ಸಲ್ಮಾನ್ ಕರೆಮನ್ಸೂರ್, ಸಚಿನ್ ಭಜಂತ್ರಿ ಎಂಬವವರು ಕೊಲೆ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ನಿನ್ನೆ ರಾತ್ರಿ ಶರಣಪ್ಪನವರ ಕುರಿಗಳನ್ನು ಕಳ್ಳತನ ಮಾಡಿದ್ದರು. ಇವರನ್ನು ಗಮನಿಸಿದ ಶರಣಪ್ಪ ತಕ್ಷಣವೇ ಮೂವರನ್ನು ಸೆರೆಹಿಡಿಯಲು ಬೆನ್ನಟ್ಟಿದ್ದಾರೆ. ಆದರೆ, ಆರೋಪಿಗಳು ತಪ್ಪಿಸಿಕೊಳ್ಳುವ ಸಲುವಾಗಿ ಶರಪ್ಪನ ಮೇಲೆ ಕಲ್ಲು, ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೈದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.