ಮಾಗಡಿ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಸ್ನೇಹಿತರೇ ಸ್ನೇಹಿತನ ತಲೆ ಮೆಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಮಾಗಡಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಪ್ರವೀಣ್(33) ವರ್ಷ ಕೊಲೆಯಾದ ಯುವಕ. ಮಾಗಡಿ ಪಟ್ಟಣದ ಕಾಳಿಕಾಂಬ ದೇವಾಲಯದ ಬಳಿಯ ನಿವಾಸಿ.
ಅವರೆ ಕಾಯಿ ವ್ಯಾಪಾರ ಮಾಡುತ್ತಿದ್ದ ಮೃತ ಪ್ರವೀಣ್. ಈ ಹಿಂದೆ ತರಕಾರಿ ಮಾರಾಟ ಮಾಡುವ ವಿಚಾರವಾಗಿ ಸ್ನೇಹಿತರೊಂದಿಗೆ ಗಲಾಟೆ ಮಾಡಿಕೊಂಡಿದ್ದ.
ಗುರುವಾರ ರಾತ್ರಿ ಕುಡಿದ ಮತ್ತಿನಲ್ಲಿದ್ದ ಆರಂಭಗೊಂಡ ಕಲಹದಲ್ಲಿ ಅತಿರೇಕಕ್ಕೆ ಹೋಗಿ ಪಕ್ಕದಲ್ಲಿಯೇ ಸಿಮೆಂಟ್ ಇಟ್ಟಿಗೆಯನ್ನು ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಲಾಗಿದೆ.
. ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರು ತಂಡ ರಚಿಸಿದ್ದಾರೆ. ಸ್ಥಳಕ್ಕೆ ಕುದೂರು ಇನ್ಸ್ ಪೆಕ್ಟರ್ ನವೀನ್ ,ಎಫ್ ಎಸ್ ಎಲ್ ಟೀಂ, ಹಾಗೂ ಬೆರಳಚ್ಚು ತಂಡ ಭೇಟಿ ಪರೀಶೀಲನೆ ನಡೆಸಿ ಮೃತದೇಹವನ್ನು ರಾಜರಾಜೇಶ್ವರಿ ಶವಾಗಾರಕ್ಕೆ ಕೋಡೋಯ್ದಿದ್ದಾರೆ