ಜಿಲ್ಲೆ

ಮಾನವನೇ ಪ್ರಕೃತಿಯ ವಿನಾಶದ ಕೃರ್ತ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾನವನೇ ಪ್ರಕೃತಿಯ ವಿನಾಶದ ಕೃರ್ತ. ಪರಿಸರ ರಣೆಯಲ್ಲಿ ನಮ್ಮ ಉಳಿವು ಅಡಗಿದೆ ಎಂದು ಡಯಟ್​ ಪ್ರಾಚಾಯೆರ್ ಜಯಶ್ರೀ ಕಾರೇಕರ ಅಭಿಪ್ರಾಯಪಟ್ಟರು.
ವಿಶ್ವ ಪರಿಸರ ನಿಮಿತ್ತ ನಗರದ ಡಯಟ್​ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಹು&ಧಾ ನಾಗರಿಕ ಪರಿಸರ ಸಮಿತಿ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಥಿರ್ಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಚಿತ್ರಕಲೆ&ಭಾಷಣ ಹಾಗೂ ನಿಬಂಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ರಣೆ ಪ್ರಚಾರಕ್ಕಲ್ಲ. ಅದು ಪ್ರತಿಯೊಬ್ಬರ ಅಂತರಂಗದ ಹಂಬಲವಾಗಿರಬೇಕು. ಪರಿಸರಕ್ಕೆ ಹಾನಿಯಾದರೆ ಅದು ನಮ್ಮ ಹಾನಿಯೇ ಎಂಬ ಎಚ್ಚರಿಕೆ ತಂದುಕೊಳ್ಳಬೇಕು. ಶಿಣ ಇಲಾಖೆ ಮಕ್ಕಳಿಗೆ ಬಾಲ್ಯಾವಸ್ಥೆಯಿಂದಲೇ ಶಾಲಾ ಮಟ್ಟದಲ್ಲಿ ಪರಿಸರ ರಣೆಗೆ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸುತ್ತಿದೆ. ವಿದ್ಯಾಥಿರ್ಗಳು ಪರಿಸರ ರಣೆ ತಮ್ಮ ಆದ್ಯ ಕರ್ತವ್ಯ ಎಂದು ತಿಳಿಯಬೇಕು ಎಂದರು.
ಅಧ್ಯತೆ ವಹಿಸಿದ್ದ ಜಿಲ್ಲಾ ಪರಿಸರ ಅಧಿಕಾರಿ ಜಗದೀಶ ಐ.ಎಚ್​ ಮಾತನಾಡಿ, ನಾವು ವಾಸಿಸುವ ಭೂಮಿ ಜೀವಿಗಳಿರುವ ಏಕೈಕ ಗ್ರಹವಾಗಿದ್ದು, ಸಮೃದ್ಧ ಹಾಗೂ ಸುಗಮ ಜೀವನಕ್ಕೆ ಸಕಲ ಜೀವರಾಶಿಗಳನ್ನು ರಸುವುದು ಅಗತ್ಯ. ಭೂಮಿ ಮೇಲಿನ ಸಕಲ ಜೀವರಾಶಿಗಳಿಗೂ ರಾ ಕವಚವಾದ ಓಝೊನ್​ ಇಂದು ವಾಯು ಮಾಲಿನ್ಯದಿಂದ ನಶಿಸುತ್ತಿದೆ. ಆಧುನಿಕತೆಯ ನೆಪದಲ್ಲಿ ಮಾನವನ ಪ್ಲಾಸ್ಟಿಕ ಬಳಕೆ ಇಡೀ ಭೂಮಂಡಲವನ್ನೇ ಕಸದ ತೊಟ್ಟಿಯನ್ನಾಗಿ ಮಾಡಿದೆ. ನತ್ಯಾಜ್ಯ ವಸ್ತುಗಳ ಸಮರ್ಪಕ ನಿರ್ವಹಣೆಯಾಗದೆ ಪರಿಸರ ಅಪಾಯದ ಸ್ಥಿತಿಯಲ್ಲಿದೆ. ಇವುಗಳಿಗೆ ತಣ ಕಡಿವಾಣ ಹಾಕದಿದ್ದರೆ ಮುಂದೊಂದು ದಿನ ಮನುಕುಲ ದೊಡ್ಡ ಗಂಡಾಂತರಕ್ಕೆ ಸಿಲುಕಲಿದೆ ಎಂದರು.
ವಿದ್ಯಾಥಿರ್ಗಳಿಗೆ ಪರಿಸರ ಜಾಗೃತಿ ಮೂಡಿಸಲು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹು&ಧಾ ನಾಗರಿಕ ಪರಿಸರ ಸಮಿತಿ ಅಧ್ಯ ಶಂಕರ ಕುಂಬಿ ಸ್ವಾಗತಿಸಿದರು. ಕೆ. ಎಚ್​. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತಾ ದೊಡವಾಡ ನಿರೂಪಿಸಿದರು. ವಿಲಾಸ ಕುಲಕಣಿರ್ ವಂದಿಸಿದರು.