ಸಿದ್ದಾಪುರ: ಸಂಸ್ಕಾರದಿಂದ ಧರ್ವರ್ಥ ಕಾಮ ಮೋಕ್ಷಗಳು ದೊರೆಯುತ್ತವೆ ಎಂದು ನಿರ್ಗಾನ್ನ ವಿ. ವಿಶ್ವನಾಥ ಭಟ್ಟ ಹೇಳಿದರು.
ಶ್ರೀ ಮಾಧವಾನಂದ ಬಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀಮನ್ನೆಲೆಮಾವು ಮಠದಲ್ಲಿ ಆಯೋಜಿಸಿರುವ ಚಾತುರ್ವಸ್ಯ ವ್ರತಾಚರಣೆಯಲ್ಲಿ ಅವರು ಮಾತನಾಡಿದರು.
ಮಾನವನು ದೇವಋಣ, ಋಷಿ ಋಣ ಹಾಗೂ ಪಿತೃ ಋಣ ತೀರಿಸಲು ಸಂಸ್ಕಾರಗಳಿಂದ ಸಾಧ್ಯ. ಸಂಸ್ಕಾರಗಳಿಂದ ಮಾನವನು ಪುನೀತನಾಗುತ್ತಾನೆ. ಇಂತಹ ಸಂಸ್ಕಾರಗಳು ಶ್ರುತಿ- ಸ್ಮೃ ಪುರಾಣಗಳಿಂದ, ಋಷಿಗಳಿಂದ ಹಾಗೂ ನಮ್ಮ ಪೂರ್ವಜರಿಂದ ದೊರಕಿವೆ. ಇವುಗಳನ್ನು ಉಳಿಸಿ, ಬೆಳೆಸಿ, ಮುಂದಿನ ಜನಾಂಗಕ್ಕೆ ತಲುಪಿಸುವುದು ಅವಶ್ಯವಾಗಿದೆ ಎಂದರು.