ವಿಜಯಪುರ: ಮಕ್ಕಳು ರಜೆಯಲ್ಲಿ ಮಜಾ ಮಾಡುವುದನ್ನು ನಾನು ಕಂಡಿದ್ದೇನೆ. ಆದರೆ, ನೀವೆಲ್ಲ ಜ್ಞಾನ ಹೆಚ್ಚಿಸಿಕೊಳ್ಳುವ ಕಾರ್ಯದಲ್ಲಿ ಮಗ್ನರಾಗಿರುವುದು ಸಂತಸವಾಗಿರುವೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎನ್.ಎಚ್. ನಾಗೂರ ಹರ್ಷ ವ್ಯಕ್ತಪಡಿಸಿದರು.
ನಗರ ಹೊರ ವಲಯದ ಅರಕೇರಿ ಸರ್ಕಾರಿ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮತ್ತು ಆಸಕ್ತಿ ಹೊಂದಿದ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ವಿಶೇಷ ವರ್ಗ ಬೋಧನಾ ಶಿಬಿರಕ್ಕೆ ಇತ್ತೀಚೆಗೆ ಆಕಸ್ಮಿಕವಾಗಿ ಭೇಟಿ ಮಾತನಾಡಿದ ಅವರು, ಸಕಲ ಜೀವರಾಶಿಗಳಲ್ಲಿ ಮನುಷ್ಯನೇ ಬುದ್ಧಿವಂತ ಜೀವಿ. ವಿದ್ಯಾರ್ಥಿಗಳು ತಾಯಿ, ತಂದೆ ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಗೌರವಿದಿಂದ ಕಾಣಬೇಕು. ಸಮಯ ವ್ಯರ್ಥ ಮಾಡದೇ ಅಂದಿನ ಪಾಠವನ್ನು ಅಂದೇ ಓದುವ ಹವ್ಯಾಸ ರೂಢಿಸಿಕೊಂಡು ಅಧ್ಯಯನಶೀಲರಾಗುವಂತೆ ಸಲಹೆ ನೀಡಿದರು.
ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಎಸ್.ಎಂ. ಶಿರಾಳಶೆಟ್ಟಿ. ಸದಸ್ಯ ಪೀರ್ ಪಟೇಲ್ ಪಾಟೀಲ, ಭೀಮಣ್ಣ ಸಿಂದೆ, ಮುಖ್ಯ ಗುರು ಎಲ್.ಟಿ. ಮುಲ್ಲಾ. ಎಚ್.ಎಲ್. ಕುಡಚಿ, ವಿನಾಯಕ ಕಾಖಂಡಕಿ, ರವೀಂದ್ರ ಝಳಕಿ, ರವೀಂದ್ರ ಬೆಣ್ಣೂರ, ಅನಿಲ್ ರಾಠೋಡ ಮತ್ತಿತರರಿದ್ದರು.