ಜಿಲ್ಲೆ

ಬೈಕ್‌ನಿಂದ ಬಿದ್ದು ಯುವಕನಿಗೆ ಗಾಯ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಬೈಕ್ ಸ್ಕಿಡ್ ಆದ ಪರಿಣಾಮ ಯುವಕನೊಬ್ಬ ಗಾಯಗೊಂಡ ಘಟನೆ ನವಲೂರ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕುಮಾರೇಶ್ವರನಗರ ನಿವಾಸಿ ಮಂಜುನಾಥ ಬೇವೂರ ಗಾಯಾಳು. ಈತ ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಗಾಯಗೊಂಡ ಮಂಜುನಾಥನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.