ಜಿಲ್ಲೆ

ಚಿರತೆ ಬೋನಿಗೆ ಸಿಲುಕಿದ ಮಾನಸಿಕ ಅಸ್ವಸ್ಥ

ಎ. ಆರ್. ರಘುರಾಮ

ಗುಂಡ್ಲುಪೇಟೆ : ತಾಲೂಕಿನ ಪಡಗೂರು ಗ್ರಾಮದಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿನೊಳಗೆ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಪ್ರವೇಶಿಸಿದ ವಿಲಕ್ಷಣ ಘಟನೆ ಬುಧವಾರ ನಡೆದಿದೆ. ಕೆಲ ದಿನಗಳಿಂದ ಗ್ರಾಮದಲ್ಲಿ ಹುಲಿ, ಚಿರತೆಗಳು ದಾಳಿಯಿಂದ ಸಾಕು ಪ್ರಾಣಿಗಳು ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬೋನು ಇಟ್ಟಿತ್ತು. ಚಾಲಾಕಿ ಚಿರತೆಗಳು ಬೋನಿಗೆ ಬೀಳದ ಯಾಮಾರಿಸುತ್ತಿತ್ತು. ಹಾಗಾಗಿ ಕೊಟ್ಟಿಗೆ ಮಾದರಿಯ ಅರಣ್ಯ ಸಿಬ್ಬಂದಿ ಬೋನು ಅಳವಡಿಸಿ ಅದರೊಳಗೆ ಮೇಕೆ ಕಟ್ಟಿಹಾಕಿದ್ದರು. ಆದರೆ ಚಿರತೆಯ ಬದಲು ಗ್ರಾಮದ ಮಾನಸಿಕ ಅಸ್ವಸ್ಥ ವ್ಯಕ್ತಿ ಹೇಗೋ ಪ್ರವೇಶಿಸಿ ಕುಳಿತಿದ್ದಾನೆ. ವ್ಯಕ್ತಿ ಒಳಗೆ ಪ್ರವೇಶಿಸುತ್ತಿದ್ದಂತೆ ಬೋನಿನ ಬಾಗಿಲು ಸ್ವಯಂ ಚಾಲಿತವಾಗಿ ಮುಚ್ಚಿಕೊಂಡಿದೆ. ವಿಷಯ ತಿಳಿದ ಅಕ್ಕಪಕ್ಕದ ಜಮೀನಿನ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ತೆರಳಿದ ಬಫರ್ ವಲಯದ ಸಿಬ್ಬಂದಿ ವ್ಯಕ್ತಿಯನ್ನು ಹೊರ ತಂದಿದ್ದಾರೆ.