ಜಿಲ್ಲೆ

ನೇಣು ಬಿಗಿದುಕೊಂಡು ಬಿಹಾರ ಮೂಲದ ವ್ಯಕ್ತಿ ಆತ್ಮಹತ್ಯೆ

ಭಟ್ಕಳ: ಗಾರೆ ಕೆಲಸಕ್ಕೆ ಬಂದಿದ್ದ ಬಿಹಾರ ಮೂಲದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುರುಳಿಸಾಲ ಮನೆಯೊಂದರಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ರಂಜಿತ ಕುಮಾರ (27) ಬಿಹಾರ ಎಂದು ತಿಳಿದು ಬಂದಿದೆ. ಈತನ ಸಹೋದರ ಕಳೆದ 14 ವರ್ಷದಿಂದ ಭಟ್ಕಳದಲ್ಲಿ ಗಾರೆ ಕೆಲಸ ಮಾಡುತ್ತಿದ್ದಾನೆ. ರಂಜಿತಕುಮಾರ 5 ವರ್ಷದ ಹಿಂದೆ ಪಟ್ಟಣಕ್ಕೆ ಬಂದಿದ್ದ. ಈತನ ಪತ್ನಿ 3 ದಿನದ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಬಿಹಾರದಲ್ಲಿರುವ ತನ್ನ ಕುಟುಂಬದವರೊಂದಿಗೆ ರಂಜಿತ ಕುಮಾರ ದೂರವಾಣಿ ಮೂಲಕ ಮಾತನಾಡಿದ್ದ ಎನ್ನಲಾಗಿದೆ.

ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.