ಜಿಲ್ಲೆ

ಮಳೆ ರಭಸಕ್ಕೆ ಸಿಲುಕಿ ವ್ಯಕ್ತಿ ಕಣ್ಮರೆ

ಹುಬ್ಬಳ್ಳಿ: ಬುಧವಾರ ರಾತ್ರಿ ಸುರಿದ ಭಾರಿ ಮಳೆಯ ರಭಸಕ್ಕೆ ಇಲ್ಲಿಯ ಅಯೋದ್ಯ ಗ್ರಾಮದ ನೇಕಾರನಗರ ಬ್ರಿಜ್ ಹತ್ತಿರ ಬೈಕ್‌ನಲ್ಲಿ ರಸ್ತೆ ದಾಟುವಾಗ ಹುಸೇನಸಾಬ್ ಸೈಯದ್‌ಸಾಬ್ ಕಳಸ (58) ಸಿಲುಕಿ ಕಣ್ಮರೆಯಾಗಿದ್ದಾರೆ.

ಹುಸೇನ್‌ಸಾಬ್ ಅವರೊಂದಿಗೆ ಬೈಕ್‌ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ. ತಹಸೀಲ್ದಾರ್ ಕಲಗೌಡ ಪಾಟೀಲ ನೇತೃತ್ವದಲ್ಲಿ ತಾಲೂಕು ಆಡಳಿತವು ಕಣ್ಮರೆಯಾದ ವ್ಯಕ್ತಿ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ತಪಾಸಣೆ ಕಾರ್ಯ ಮುಂದುವರಿದಿದೆ.

ಹೆಚ್ಚಿನ ಕಾರ್ಯಾಚರಣೆ ನಡೆಸಲು ಬೆಳಗಾವಿಯಿಂದ ಗುರುವಾರ ಸಂಜೆ ಎಸ್‌ಡಿಆರ್‌ಎಫ್ ತಂಡ ಆಗಮಿಸಲಿದೆ. ಶುಕ್ರವಾರ (ಜೂ. 13) ಬೆಳಗ್ಗೆ 8.30ಕ್ಕೆ ತಪಾಸಣೆ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.