ಜಿಲ್ಲೆ

ಸಾಲಗಾಂವ ಕೆರೆಯಲ್ಲಿ ಬಿದ್ದು ವ್ಯಕ್ತಿ ಸಾವು

ಮುಂಡಗೋಡ: ಮೀನು ಹಿಡಿಯಲು ಕೆರೆಗೆ ಇಳಿದಿದ್ದ ವ್ಯಕ್ತಿಯೊಬ್ಬ ಆಯತಪ್ಪಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಸಾಲಗಾಂವ ಗ್ರಾಮದಲ್ಲಿ ಶನಿವಾರ ಜರುಗಿದೆ.

ಸಾಲಗಾಂವ ಗ್ರಾಮದ ಗುಡ್ಡಪ್ಪ ಜಾಡರ (58) ಸಾವನ್ನಪ್ಪಿದ್ದಾನೆ.

ಈತ ಮೀನು ಹಿಡಿಯಲು ಬಲೆ ಬಿಟ್ಟಿದ್ದ ವೇಳೆ ಆಯತಪ್ಪಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ವಿಷಯ ತಿಳಿದ ಗ್ರಾಮಸ್ಥರು ಹಾಗೂ ಪೊಲೀಸರು ಮೃತದೇಹ ಹುಡು ಕಾಟ ನಡೆಸಿದ್ದರು.

ಪಿಎಸ್​ಐ ಪರಶುರಾಮ ಮಿರ್ಜಗಿ ಕೆರೆಯಲ್ಲಿ ಮೃತದೇಹ ಹುಡುಕಿ ದಡಕ್ಕೆ ತಂದಿದ್ದಾರೆ. ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.